ಕರಾವಳಿಯ ಸೌಹಾರ್ದತೆ ಸಾರುವ ಪವಿತ್ರ ಪುಣ್ಯ ಕ್ಷೇತ್ರ, ಬಿಕರ್ನಕಟ್ಟೆಯ ಬಾಲ ಯೇಸು ಮಂದಿರ

ಕರಾವಳಿಯಲ್ಲಿರುವ ಆ ಪವಿತ್ರ ಪುಣ್ಯ ಕ್ಷೇತ್ರ ಸೌಹಾರ್ದತೆಯ ಪಾಠ ಮಾಡ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಲ್ಲಿಗೆ ಸರ್ವಧರ್ಮದ ಭಕ್ತರ ದಂಡೇ ಹರಿದು ಬಂದಿದೆ. ಅಷ್ಟಕ್ಕೂ ಕರಾವಳಿಯಲ್ಲಿ ಸೌಹಾರ್ದತೆ ಸಾರ್ತಿರೋ ಆ ಪುಣ್ಯಕ್ಷೇತ್ರ ಯಾವುದು? ಅಲ್ಲಿನ ವಾರ್ಷಿಕ ಜಾತ್ರಾ ಸಂಭ್ರಮ ಹೇಗಿದೆ ಅಂತೀರಾ!

ಮಂಗಳೂರಿನ ಬಿಕರ್ನಕಟ್ಟೆಯ ಆ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ. ಇತಿಹಾಸ ಪ್ರಸಿದ್ಧವಾಗಿರೋ ಕ್ರೈಸ್ತರ ಧಾರ್ಮಿಕ ತಾಣ ಬಾಲ ಯೇಸು ಮಂದಿರ ಈ ಭಾಗದ ಸರ್ವಧರ್ಮದ ಜನರ ಆರಾಧನಾ ಕೇಂದ್ರ. ಹೀಗಾಗಿಯೇ ಇಲ್ಲಿ ಒಂಭತ್ತು ದಿನಗಳ ಕಾಲ ನಡೆಯೋ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜಾತಿ-ಧರ್ಮದ ಹಂಗಿಲ್ಲದೇ ಕರಾವಳಿಯ ಜೊತೆಗೆ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರು ಆಗಮಿಸ್ತಾರೆ.

ಇಲ್ಲಿ ನೆಲೆನಿಂತಿರೋ ಬಾಲಯೇಸು ಪವಾಡಗಳನ್ನು ನಡೆಸೋ ಮೂಲಕ ಲಕ್ಷಾಂತರ ಜನ್ರ ಬದುಕಲ್ಲಿ ಬೆಳಕು ಮೂಡಿಸಿದ್ದಾನೆ ಅನ್ನೋದು ಸರ್ವಧರ್ಮದ ಭಕ್ತರ ನಂಬಿಕೆ. ಹೀಗಾಗಿ ಒಳಿತನ್ನು ಕಂಡು ಎಲ್ಲಾ ಧರ್ಮಿಯರು ವಾರ್ಷಿಕ ಜಾತ್ರೆಯ ಆ ಒಂಬತ್ತು ದಿನಗಳ ಕಾಲ ಕ್ಷೇತ್ರಕ್ಕೆ ಆಗಮಿಸ್ತಾರೆ. ಇಲ್ಲಿನ ಬಾಲಯೇಸುವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗ್ತಾರೆ. ಇಲ್ಲಿಗೆ ಬರೋ ಅನ್ಯಧರ್ಮದ ಭಕ್ತರಿಗೆ ಇಲ್ಲಿ ಧರ್ಮದ ವಿಚಾರದಲ್ಲಿ ಗೊಂದಲಗಳೇ ಇಲ್ಲ.

ಎಲ್ಲ ಧರ್ಮದವ್ರು ದೆವ್ರನ್ನ ಆರಾಧಿಸೋ ಮೂಲಕ ಭಾವುಕರಾಗ್ತಾರೆ. ಹೀಗಾಗಿಯೇ ಇಡೀ ಕರಾವಳಿಯಲ್ಲೇ ಅನ್ಯಧರ್ಮೀಯರು ಅತೀ ಹೆಚ್ಚು ಆರಾಧಿಸೋ ಕ್ರೈಸ್ತ ಧಾರ್ಮಿಕ ಕೇಂದ್ರವಾಗಿ ಈ ಬಾಲಯೇಸು ಮಂದಿರ ಎದ್ದು ನಿಂತಿದೆ..ಇನ್ನೂ ಪ್ರಮುಖ ಬಲಿಪೂಜೆಯೂ ತೆರೆದ ಮೈದಾನದಲ್ಲಿ ಅರ್ಪಿಸಲಾಯಿತು.
