ಬೈಂದೂರು : ದೋಣಿ ಅವಘಡದಲ್ಲಿ ನಾಪತ್ತೆಯಾದ ಯುವಕ : ಡ್ರೋನ್ ಮೂಲಕ ಶೋಧ ಕಾರ್ಯ

ಬೈಂದೂರು ವ್ಯಾಪ್ತಿಯ ಉಪ್ಪುಂದ ಸಮೀಪ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ನಾಪತ್ತೆಯಾಗಿರುವ ಮೀನುಗಾರನ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ. ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ
ಸತೀಶ್ ಕಾರ್ವಿ ಮೀನುಗಾರನ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಮಲ್ಪೆ ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿ.ಐ ನಂಜಪ್ಪ ಎನ್ ರವರ ನೇತೃತ್ವದ ತಂಡ ಡ್ರೋನ್ ಕ್ಯಾಮರಾದ ಮೂಲಕ ನಾಪತ್ತೆಯಾದ ಮೀನುಗಾರರ ಪತ್ತೆಯ ಕಾರ್ಯ ಕೈಗೊಂಡಿರುತ್ತಾರೆ.
