ಉಡುಪಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ

ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಡಿಗ್ರಿ ಪಾಸಾದ ಮೇಲೆ ನಿಮಗೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದರು.

ಇನ್ನು ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ‘ನಮಗೆ ಲ್ಯಾಪ್‍ಟಾಪ್ ಅವಶ್ಯಕತೆಯಿದ್ದು ಅದನ್ನು ಕೊಡಬೇಕಾಗಿ ಬೇಡಿಕೆಯಿಟ್ಟಿದ್ದಾರೆ. ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ಬೇಡಿಕೆಯನ್ನು ಸಿಎಂ ಮುಂದಿಟ್ಟಿದ್ದಾರೆ. ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅಗತ್ಯವಿದೆ. ನಮಗೆ ಲ್ಯಾಪ್ ಟಾಪ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಈ ವೇಳೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.