Home Blog Full WidthPage 211

ಕೊಲ್ಲೂರು : ಮಾನಸಿಕ ಅಸ್ವಸ್ಥ ಮಹಿಳೆಗೆ ಪುನರ್ವಸತಿ ಕಲ್ಪಿಸಿದ ಪೊಲೀಸರು

ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕೊಲ್ಲೂರಿನ ಸಲಗೇರಿ ಎಂಬಲ್ಲಿ ತಿರುಗಾಡುತ್ತಿದ್ದು, ಇದನ್ನು ಮನಗಂಡ ಸ್ಥಳೀಯರು ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆಕೆಯನ್ನು ಮಂಜೇಶ್ವರದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು. ಮಹಿಳೆ ತಿರುಗಾಡುತ್ತಿದ್ದ ವಿಚಾರವನ್ನು ಸ್ಥಳೀಯರು ಮತ್ತು ರಿಕ್ಷಾ ಚಾಲಕರು ಕೊಲ್ಲೂರು ಟಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಪಂದಿಸಿದ

Bantwala : ವಾಣಿಜ್ಯ ಸಂಕೀರ್ಣದಿಂದ ಕೆಳಗೆ ಚಿಮ್ಮುತ್ತಿರುವ ಮಳೆ ನೀರು – ಪಾದಚಾರಿಗಳಿಗೆ ಸಮಸ್ಯೆ

ಬಂಟ್ವಾಳ: ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮುಂಭಾಗ ಖಾಸಗಿ ಬಸ್ಸುಗಳು ತಂಗುತ್ತವೆ. ಪ್ರಯಾಣಿಕರು ವಾಣಿಜ್ಯ ಕೇಂದ್ರದ ಅಂಗಡಿಗಳ ಮುಂಭಾಗದ ಪ್ಯಾಸೇಜ್ ನಲ್ಲಿ ನಿಲ್ಲುತ್ತಾರೆ. ಖಾಲಿ ಬಿಟ್ಟ ಕೋಣೆಯಲ್ಲಿ ಸೊಳ್ಳೆಗಳ ಸಾಮ್ರಾಜ್ಯ. ಅದು ಒಂದು ಭಾಗವಾದರೆ, ಇನ್ನೊಂದು ಸಮಸ್ಯೆ ಈ ಸಂಕೀರ್ಣದ ಹಿಂದೆ ಮತ್ತೊಂದು ವಾಣಿಜ್ಯ ಸಂಕೀರ್ಣವಿದೆ. ಇವೆರಡರ ಮಧ್ಯೆ ರಸ್ತೆಯೂ ಇದೆ. ಇಲ್ಲಿನ ಮಳಿಗೆಗಳಿಗೆ ನೂರಾರು ಮಂದಿ ನಿತ್ಯ ಓಡಾಡುತ್ತಾರೆ. ಆದರೆ

ಶೌರ್ಯ ವಿಪತ್ತು ಘಟಕದಿಂದ ಶಾಂಭವಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ತ್ಯಾಜ್ಯಗಳ ತೆರವು

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲ ಬಳಿ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ ತ್ಯಾಜ್ಯಗಳು ಸಿಲುಕಿ ಹಾಕಿಕೊಂಡಿದ್ದು, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಶೌರ್ಯ ವಿಪತ್ತು ಘಟಕ ಮುಂದಾಗಿದ್ದು, ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ತ್ಯಾಜ್ಯಗಳನ್ನು ತೆರವು ಮಾಡಿದರು. ಕಿಂಡಿ ಅಣೆಕಟ್ಟುವಿಗೆ ಕಡಿದು ಹಾಕಿದ ಬೃಹತ್ ಗಾತ್ರದ ಮರದ ದಿಮ್ಮಿ , ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ

ಮೂಡುಬಿದರೆ : ಅಕ್ಷರದಾಸೋಹ ನೌಕರರ ಪ್ರತಿಭಟನೆ

ಮೂಡುಬಿದಿರೆ : ಸರಕಾರಿ ಮತ್ತು ಅನುದಾನ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು ಎಂದು ಆಗ್ರಹಿಸಿ, ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕಿನ ಕ.ರಾ. ಅಕ್ಷರ ದಾಸೋಹ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು. ಮೂಡುಬಿದಿರೆ ಸಿಐಟಿಯುನ ಮಾಜಿ ಅಧ್ಯಕ್ಷೆ ರಮಣಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದಿನಕ್ಕೆ ಆರು ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿರುವ ರಾಜ್ಯದ

ಮೂಡುಬಿದರೆ ಆಳ್ವಾಸ್ ನಲ್ಲಿ ಜುಲೈ 14 ರಿಂದ 16ರವರೆಗೆ ಹಲಸು ವೈವಿಧ್ಯಮಯ ಹಣ್ಣುಗಳ ಮೇಳ

ಮೂಡುಬಿದಿರೆ : ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ” ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾ ಮೇಳ ಜುಲೈ 14 ರಿಂದ 16 ರವರೆಗೆ ವಿದ್ಯಾಗಿರಿಯ ಕೆ ಅಮರನಾಥಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು

ಮೂಡುಬಿದರೆ: ಯುವಕ ನೇಣಿಗೆ ಶರಣು

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಹೌದಾಲ್ ಸಮೀಪದ ಮರಿಯಾಡಿಯ ಯುವಕ ಪಾರಿಸ್ (20) ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದ ಪಾರಿಸ್‍ನ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೃಢಕಲಶ ಹಿನ್ನೆಲೆ ಧಾರ್ಮಿಕ ಸಭೆ

ಬಡತನ ಹಾಗೂ ಕಷ್ಟದಲ್ಲಿರುವವರಿಗೆ ನಮ್ಮಿಂದಾಗುವ ಸಹಾಯ ಮಾಡುವ ಮೂಲಕ ಮಾನವ ತತ್ವವನ್ನು ಸಹಕಾರ ಗೊಳಿಸಬೇಕು, ನೊಂದಿರುವ ವ್ಯಕ್ತಿಗೆ ಮಾಡುವ ಸೇವೆಯೇ ದೇವರಿಗೆ ನಿಜವಾಗಿ ಮಾಡುವ ಸೇವೆ, ಕುಲಾಲ ಸಮಾಜದ ಒಗ್ಗಟ್ಟಿನ ಶಕ್ತಿ ಕೇಂದ್ರವಾಗಿ ಶ್ರೀ ವೀರನಾರಾಯಣ ಕ್ಷೇತ್ರ ಭವ್ಯವಾಗಿ ನಿರ್ಮಾಣಗೊಂಡಿದೆ. ದೇವಸ್ಥಾನಗಳು ಅಂತರಂಗವನ್ನು ಗಟ್ಟಿಗೊಳಿಸುವ ಆಧ್ಯಾತ್ಮಿಕದ ಜಿಮ್ಮಾ ಸೆಂಟರ್ ಆಗಬೇಕು ಎಂದು ಕೇಮಾರು ಶ್ರೀ ಸಂದೀಪನಿ ಸಾಧನ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.

ಮಂಜೇಶ್ವರ : ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹ

ಮಂಜೇಶ್ವರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ಮೂಲನೆಗೆ ಹಸಿರು ಕರ್ಮ ಸೇನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಶುಲ್ಕವನ್ನು ಪಡೆದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೊಂಡೊಯ್ಯುತ್ತಿರುವುದು ಸ್ಥಳೀಯರಲ್ಲಿ ಅಲ್ಪವಾದರೂ ಸಮಾಧಾನವನ್ನು ಹುಟ್ಟಿಸಿದೆ. ಕೆಲವೊಂದು ಕುಟುಂಬಗಳು ಈಗಲೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಹಾಕುತ್ತಿರುವುದು ಮುಂದುವರಿದಿದೆ. ಇಂತಹ ತ್ಯಾಜ್ಯಗಳನ್ನು ಹುಡುಕಿಕೊಂಡು ಬರುತ್ತಿರುವ ಬೀದಿ ನಾಯಿಗಳು

ಪುತ್ತೂರು : ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದ ಜಾಲ ಪತ್ತೆ

ಪುತ್ತೂರು: ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಯ ನಕಲಿ ಸೀಲು ಹಾಗೂ ಸಹಿ ಬಳಸಿ ದಾಖಲೆ ಸಿದ್ಧಪಡಿಸುತ್ತಿದ್ದ ಜಾಲವನ್ನು ಸಾರ್ವಜನಿಕರ ದೂರಿನ ಮೇರೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪತ್ತೆ ಹಚ್ಚಿದ್ದಾರೆ. ಕೊಡಿಪ್ಪಾಡಿ ನಿವಾಸಿ ವಿಶ್ವನಾಥ ದಂಧೆ ನಡೆಸುತ್ತಿದ್ದ ವ್ಯಕ್ತಿ. ನಗರ ಸಭೆ ನಿರಾಕ್ಷೇಪಣಾ ಪತ್ರ, ತೆರಿಗೆ ರಶೀದಿ, ಪುತ್ತೂರು ಎಲ್ಲಾ ಪಂಚಾಯಿತಿ ಕಡಬ, ಸುಳ್ಯ, ಬಂಟ್ವಾಳ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳ ನಕಲಿ ದಾಖಲೆಗಳನ್ನು

ಕಡಬ: ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಯುವ ಬ್ರಿಗೇಡ್‌ನಿಂದ ಸರಕಾರಕ್ಕೆ ಮನವಿ

ಕಡಬ: ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ಯುವ ಬ್ರಿಗೇಡ್‌ನ ವೇಣುಗೋಪಾಲ್ ಹಾಗೂ ಚಿಕ್ಕೋಡಿಯಲ್ಲಿ ಜೈನ ಮುನಿಗಳ ಅವರ ಬರ್ಭರ ಹತ್ಯೆಯನ್ನು ಖಂಡಿಸಿ ಮತ್ತು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಡಬ ಯುವಬ್ರಿಗೇಡ್ ವತಿಯಿಂದ ಮನವಿ ಸಲ್ಲಿಸಲಾಯಿತು. ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಎರಡು ಹತ್ಯೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತೆ ಮಾಡಿದ್ದು ಭಯದ ವಾತಾವರಣ