ಕೊಲ್ಲೂರು : ಮಾನಸಿಕ ಅಸ್ವಸ್ಥ ಮಹಿಳೆಗೆ ಪುನರ್ವಸತಿ ಕಲ್ಪಿಸಿದ ಪೊಲೀಸರು

ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕೊಲ್ಲೂರಿನ ಸಲಗೇರಿ ಎಂಬಲ್ಲಿ ತಿರುಗಾಡುತ್ತಿದ್ದು, ಇದನ್ನು ಮನಗಂಡ ಸ್ಥಳೀಯರು ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆಕೆಯನ್ನು ಮಂಜೇಶ್ವರದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.

ಮಹಿಳೆ ತಿರುಗಾಡುತ್ತಿದ್ದ ವಿಚಾರವನ್ನು ಸ್ಥಳೀಯರು ಮತ್ತು ರಿಕ್ಷಾ ಚಾಲಕರು ಕೊಲ್ಲೂರು ಟಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಪಿಎಸ್‍ಐ ಜಯಶ್ರೀ ಹನ್ನೂರ ಹಾಗೂ ಸುಧಾರಾಣಿ ಅವರ ಗಮನಕ್ಕೆ ತಂದರು. ನಂತರ ಮಹಿಳೆಗೆ ಭದ್ರತೆಯನ್ನು ನೀಡಲಾಗಿತ್ತು.

ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿ ಅವರ ಗಮನಕ್ಕೆ ವಿಷಯ ತಿಳಿಸಿದರು. ಆಕೆಯ ಮಾಹಿತಿ ಪಡೆದು ಮನೆಯವರ ಪತ್ತೆಗೆ ಮನವಿ ಮಾಡಿದರು. ಕೇರಳ ರಾಜ್ಯದ ಸ್ಥಳೀಯ ಪೊಲೀಸ್ ಗು ಮಾಹಿತಿ ನೀಡಲಾಗಿದೆ. ಕೊಲ್ಲೂರು ಪೊಲೀಸ್ ನವೀನ್ ಹಾಗೂ ಪೂರ್ಣಿಮಾ ಆಕೆಯನ್ನು ಮಂಜೇಶ್ವರ ಪುನರ್ವಸತಿ ಕೇಂದ್ರ ಕರೆ ತರಲು ನೆರವಾದರು.

Related Posts

Leave a Reply

Your email address will not be published.