ಬಿಹಾರದಲ್ಲಿ ಕಟ್ಟುತ್ತಿದ್ದ ಸೇತುವೆ ಕುಸಿತ- ಒಂದು ಸಾವು, ಹಲವರಿಗೆ ಗಾಯ

ಬಿಹಾರದ ಸುಪೌಲ್ ಎಂಬಲ್ಲಿ ಕಟ್ಟುತ್ತಿದ್ದ ಸೇತುವೆ ಕುಸಿದುದರಿಂದ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇನ್ನೂ ಅವಶೇಷಗಳಡಿ ಹಲವರು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೋಸಿ ನದಿಗೆ 984 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ಕಟ್ಟಲಾಗುತ್ತಿದೆ. ಇತ್ತೀಚೆಗೆ ಬಾಗಲ್ಪುರದಲ್ಲೂ ಕಟ್ಟುತ್ತಿದ್ದ ಸೇತುವೆಯೊಂದು ಹೀಗೇ ಕುಸಿದು ಅನಾಹುತವಾಗಿತ್ತು. ಬಿಜೆಪಿ- ಜೆಡಿಎಸ್ ಭ್ರಷ್ಟಾಚಾರದ ಫಲ ಇದು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಸುಪೌಲ್ ಬಿದ್ದ ಸೇತುವೆಯಡಿ ೩೦ರಷ್ಟು ಜನ ಸಿಕ್ಕಿಕೊಂಡಿದ್ದು ರಕ್ಷಣಾ ಕಾರ್ಯವು ತೀವ್ರವಾಗಿ ಮುಂದುವರಿದಿದೆ.

Related Posts

Leave a Reply

Your email address will not be published.