ಅಂತ್ಯ ಸಂಸ್ಕಾರ ಮಾಡಲು ಅಂಗೈಯಷ್ಟು ಜಾಗವಿಲ್ಲದೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಿದ ಜಾಗ ಒತ್ತುವರಿ

ಕಾಲ್ತೋಡು ಗ್ರಾಮದ ಯಡೇರಿ ಎಂಬಲ್ಲಿ ಸರ್ವೇ ನಂಬರ್ 293/* ರಲ್ಲಿ 0.50 ಎಕ್ರೆ ಸ್ಥಳವು 1998 ರಂದು ಮಾನ್ಯ ಸಹಾಯಕ ಕಮೀಷನರ್ ಆದೇಶದಂತೆ ಹಿಂದೂ ರುದ್ರಭೂಮಿಗೆ ಕಾಯ್ದಿರಿಸಲಾಗಿದೆ. ಅದನ್ನು ಖಾಸಾಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಬಡ ಜನರ ಮೃತ ದೇಹವನ್ನು ದಫನ ಮಾಡಲು ಜಾಗವಿಲ್ಲದೆ ಪರದಾಡುವಂತಾಗಿದೆ ಎಂದು ಜನತಾ ಕಾಲೋನಿಯ ಜನರು ಅಳಲು ತೋಡಿಕೊಂಡಿದ್ದಾರೆ

ಬೈಂದೂರಿನ ಕಾಲ್ತೋಡಿನ ಯಡೇರಿ ಎಂಬಲ್ಲಿಯ ಜನತಾ ಕಾಲೋನಿಯರು ಜನರು ಹಿಂದೂ ರುದ್ರಭೂಮಿ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರರಿಗೆ ಗ್ರಾಮ ಪಂಚಾಯತ್ ಕಾಲ್ತೋಡು ಇವರಿಗೆ ಮನವಿ ನೀಡಿದ್ದೇವೆ. ಬಲವಾದ ಹಣಬಲ ರಾಜಕೀಯ ಬಲ ತೊಳ್ಬಲ ಇರುವ ವ್ಯಕ್ತಿಗಳು ಇದರಲ್ಲಿ ಶಮೀಲಾಗಿದ್ದರೆ ಯಾವ ಅಧಿಕಾರಿಗಳನ್ನು ಯಾವ ದಾರಿಗೂ ಕೊಂಡೊಯ್ಯುವ ಬಲ ಹೊಂದಿದವರು, ಯಡೇರಿ ಜನತಾ ಕಾಲೋನಿಯಲ್ಲಿ 25-30 ಮನೆಗಳಿದ್ದು 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಅಂಗೈ ಅಷ್ಟು ಜಾಗ ಇಲ್ಲ ರುದ್ರ ಭೂಮಿ ಪ್ರತಿಯೊಬ್ಬರಿಗು ಅಗತ್ಯವಾಗಿ ಬೇಕು , ಯಾರಿಗೂ ಕೂಡ ಎದುರು ಬಂದು ಮಾತನಾಡುವ ಶಕ್ತಿ ಇಲ್ಲ ಏಕೆಂದರೆ ಬೆದರಿಕೆ ನೀಡುತ್ತಿದ್ದಾರೆ.

kalthodu

ಸರಕಾರಿ ಭೂಮಿಯನ್ನು ಒಳಗೆ ಹಾಕಿ ಕೊಂಡವರು ಮೀಸಲು ಅರಣ್ಯ ಜಾಗವನ್ನೇ ಒಳಗೆ ಹಾಕಿ ಕೊಂಡವರು ಯಾವ ಅಧಿಕಾರಿಗೂ ಈ ತನಕ ಬಂದು ತನಿಖೆ ಮಾಡಲಿಲ್ಲ.ಜನತಾ ಕಾಲೋನಿಯಲ್ಲಿ ಇರುವ 25-30 ಮನೆಗಳಿಗೆ ರುದ್ರಭೂಮಿ ಅಗತ್ಯ ಇರುತ್ತದೆ. ಅಲ್ಲಿ ಇರುವ ಜನರು ಅನಕ್ಷರಸ್ಥರು ಯಾವದೂ ತಿಳಿಯದವರು ಅವರ ಪರ ಯಾರು ಕೂಡ ಇಲ್ಲ …ಯಾವ ಅಧಿಕಾರಿಯೂ ಮುಂದೆ ಬರಲ್ಲ …ಜನತಾ ಕಾಲೋನಿಯಲ್ಲಿ ಇರುವವರು ಬಾರತ ದೇಶದ ಪ್ರಜೆಗಳೇ ಎನ್ನುವ ಪ್ರಶ್ನೆ ಕಾಡುತ್ತಿದೆ… ದಯಮಾಡಿ ಬಡ ಜನರ ಮೃತ ದೇಹವನ್ನು ದಫನ ಮಾಡಲು ಜಾಗವಿಲ್ಲದ ಜನತಾ ಕಾಲೋನಿಯ ಬಡವ ಅನಕ್ಷರಸ್ಥರ ನೋವು ಮನಗೊಂಡು ನ್ಯಾಯ ಒದಗಿಸುವಂತೆ ಜನತಾ ಕಾಲೋನಿಯ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

fathermuller

Related Posts

Leave a Reply

Your email address will not be published.