ಬೈಂದೂರು: ಕೊರಗ ಸಮುದಾಯ ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಮಂಜೂರು

ಕೇಂದ್ರ ಸರಕಾರದ ಪಿ.ಎಂ ಜನ್ ಮನ್ ಯೋಜನೆಯಡಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯ ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ರೂ. 4.39 ಕೋಟಿ ಅನುದಾನ ಮಂಜೂರು.
ಕೇಂದ್ರ ಸರಕಾರದ ಪಿಎಂ ಜನ್ ಮನ್( ಪ್ರಧಾನ ಮಂತ್ರಿ ಜನ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ) ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸುಧಾರಣೆ ನಿಟ್ಟಿನಲ್ಲಿ ಹೊಸ ಅಭಿಯಾನವನ್ನು ಆರಂಭಿಸಿದ್ದು ಕರ್ನಾಟಕ ರಾಜ್ಯದಲ್ಲಿ ಕೊರಗ ಮತ್ತು ಜೇನು ಕುರುಬ ಸಮುದಾಯಗಳಿದ್ದು, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2024 ರಲ್ಲಿ ನಡೆಸಿದ ಸಮೀಕ್ಷೆಯನುಸಾರ ವಂಡ್ಸೆ, ಹರ್ಕುರು, ಇಡೂರು ಭಾಗದ ಕೊರಗ ಸಮುದಾಯದ ಮನೆಗಳು ಇರುವ ಪ್ರದೇಶ ಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ರೂ. 4.39 ಕೋಟಿ ಅನುದಾನ ಕೇಂದ್ರ ಸರಕಾರದಿಂದ ಮಂಜೂರುಗೊಂಡಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಹಾಗೂ ಮಾನ್ಯ ಪ್ರಧಾನ ಮಂತ್ರಿ ಗಳಿಗೆ ಹಾಗೂ ಸಂಸದರಾದ ಬಿ. ವೈ ರಾಘವೇಂದ್ರ ರವರಿಗೆ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.
