Home ಕರಾವಳಿ Archive by category ಮಂಗಳೂರು (Page 99)

ಮಾ. 1ರಿಂದ ಮಾ.5ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಬೆಳ್ಮ ಉತ್ಸವ

ಗ್ರಾಮದಲ್ಲಿ ಸೌಹಾರ್ಧಯುತ ವಾತಾವರಣದೊಂದಿಗೆ ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಗ್ರಾಮೋತ್ಸವಗಳು ಪೂರಕವಾಗಿದ್ದು, ಬೆಳ್ಮ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಎಲ್ಲಾ ಧರ್ಮದ ಸಂಘಟನೆಗಳನ್ನು, ಪಕ್ಷದ ಮುಖಂಡರನ್ನು ಒಟ್ಟು ಸೇರಿಸಿ ಐದು ದಿನಗಳ ಕಾಲ ನಡೆಸುವ ಬೆಳ್ಮ ಉತ್ಸವ ಕಾರ್ಯಕ್ರಮ ಇತರ

ಫೆ.17ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ”ನಿರುತ್ತಾಯಣ” ಯಕ್ಷರೂಪಕ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು (NSD) “ಭಾರತ್ ರಂಗ್ ಮಹೋತ್ಸವ್” ಎಂಬ ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರತೀವರ್ಷ ಆಯೋಜಿಸುತ್ತದೆ. ಈ ಉತ್ಸವದ 22 ನೇ ಆವೃತ್ತಿಯು, ಇದೇ ಫೆಬ್ರವರಿಯ 14 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಭಾರತದಾದ್ಯಂತ 10 ಸ್ಥಳಗಳಲ್ಲಿ ಪ್ರದರ್ಶಿಸಲು 960 ನಾಟಕಗಳಿಂದ, ಕೇವಲ  77 ನಾಟಕಗಳನ್ನು ಪ್ರಸಕ್ತ ವರ್ಷದಲ್ಲಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಸ್ತಿತ್ವ ® ಮಂಗಳೂರು ತಂಡದ

ಫೆ.11 : ಮರೋಳಿ ಶ್ರೀ ಸೂರ್ಯನಾರಾಯಣನ ಸನ್ನಿಧಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಮರೋಳಿಯ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ, ಜನ್ಮಭೂಮಿ ಫೌಂಡೇಶನ್ ಮಂಗಳೂರು ವತಿಯಿಂದ ಫೆ.11ರಂದು ಶ್ರೀ ಸೂರ್ಯನಾರಾಯಣ ಸನ್ನಿಧಿಯಲ್ಲಿ ಸಪ್ತಗಿರಿವಾಸಿಯಾದ ಶ್ರೀನಿವಾಸ ಮತ್ತು ಪದ್ಮಾವತಿಯ ಕಲ್ಯಾಣೋತ್ಸವದ ಪುಣ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಫೆ.11ರಂದು ಸಂಜೆ 4 ಗಂಟೆಗೆ ಬ್ರಹ್ಮಶ್ರೀ ಕೆ.ಯು ನೀಲೇಶ್ವರ

ಅಮೃತ ವಿದ್ಯಾಲಯಂನಲ್ಲಿ ಸಾರ್ವಜನಿಕ ಮಕ್ಕಳ ಆರೋಗ್ಯ ಶಿಬಿರ

ಇದೇ ಬರುವ ಆದಿತ್ಯವಾರ ಫೆಬ್ರವರಿ 5ರಂದು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನ ಆವರಣದಲ್ಲಿ ಸಾರ್ವಜನಿಕ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಬೆಳಿಗ್ಗೆ 8.30ರಿಂದ ಅಪರಾಹ್ನ 1.30ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಚಾಂದಿನಿ ವಿಕ್ರಂ ಶೆಟ್ಟಿ ಎಚ್ ಒ ಡಿ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್,ಇವರಿಂದ ದಂತ ನೈರ್ಮಲ್ಯದ ಬಗ್ಗೆ ಉಪನ್ಯಾಸ ಮಾಡಲಿದ್ಧಾರೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯ ಬೇಕಾಗಿ ವಿನಂತಿ.

ಶ್ರಮದಾನದ ಮೂಲಕ ರಸ್ತೆಗೆ ಚೆಲ್ಲಿದ್ದ ಮರಳು : ಅಲೋಶಿಯಸ್ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಂದತೆರವು ಕಾರ್ಯ

ನಗರದ ಅಲೋಶಿಯಸ್ ಐಟಿಐ ಕಾಲೇಜಿನ ರಸ್ತೆಯಲ್ಲಿ ಮರಳು ಸಾಗಾಟ ಲಾರಿಯಿಂದ ಮರಳು ರಸ್ತೆಗೆ ಚೆಲ್ಲಿದ್ದು ಇದರಿಂದ ದ್ವಿಚಕ್ರ ವಾಹನದಲ್ಲಿ ಚಲಿಸುವ ಸವಾರರು ಅಪಘಾತಕ್ಕೊಳಗಾಗುತ್ತಿದ್ದರು. ಇದನ್ನು ಗಮನಿಸಿದ ಅಲೋಶಿಯಸ್ ಕಾಲೇಜಿನ ಐಟಿಐ ವಿದ್ಯಾರ್ಥಿಗಳು ರಸ್ತೆಗೆ ಚೆಲ್ಲಿದ್ದ ಮರಳನ್ನು ತೆರವು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸೇವಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಊರ್ಮಿಳಾ ರಮೇಶ್‌ಗೆ ಮಾತೃ ವಿಯೋಗ

ಮಂಗಳೂರು: ಪ್ರತಿಷ್ಠಿತ ದೀಪಾ ಕಂಫರ್ಟ್‌ ಮಾಲಕಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್ ಅವರ ಮಾತೃಶ್ರೀ ರಾಧಾ ಡಿ. ಅಮೀನ್(93) ಗುರುವಾರ ಮಂಗಳೂರು ಗಾಂಧಿನಗರದ ನಿವಾಸದಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ವಿಧಿ ಗಾಂಧಿನಗರದ ನಿವಾಸದಲ್ಲಿ ಇಂದು ಸಂಜೆ 4ಗಂಟೆಗೆ ನೆರವೇರಲಿದೆ

ಕಾಟಿಪಳ್ಳದ ಗಣೇಶಪುರದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಗಲಾಟೆ

ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ನಡೆದ ಗಲಾಟೆಯು ಪರಸ್ಪರ ಹಲ್ಲೆ ನಡೆದು ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಕಾಟಿಪ್ಪಳ್ಳದ ಗಣೇಶಪುರದಲ್ಲಿ ನಡೆದಿದೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ಮತ್ತು ನಾಗೇಶ್ ಎಂಬವರ ನಡುವೆ ಸೈಡ್ ಕೊಡುವ ವಿಚಾರವಾಗಿ ಗಲಾಟೆ ನಡೆದಿದೆ. ನಾಗೇಶ್ ಹಾಗು ಜೊತೆಗಿದ್ದವರು ಫಾಝಿಲ್ ಸಹೋದರ ಆದಿಲ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದವರನ್ನು ಸಾರ್ವಜನಿಕರು ಪೆÇಲೀಸರಿಗೆ ಒಪ್ಪಿಸಿದ್ದಾರೆ.

ಫೆ. 11 ಮತ್ತು 12ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪುರುಷ, ಮಹಿಳೆಯರ ಪವರ್‍ ಲಿಫ್ಟಿಂಗ್ ಸ್ಪರ್ಧೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ

ನವಮಂಗಳೂರು ಬಂದರಿಗೆ ಅಗಮಿಸಿದ 5ನೇ ಹಡಗು ‘ಎಂಎಸ್ ನಾಟಿಕಾ’ : MS NAUTICA

ನವ ಮಂಗಳೂರು ಬಂದರಿಗೆ 5ನೇ ಪ್ರಯಾಣಿಕರ ಹಡಗು `ಎಂಎಸ್ ನಾಟಿಕಾ’ ಮಂಗಳವಾರ ಬೆಳಗ್ಗೆ ಆಗಮಿಸಿತು. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ನಿಂತಿತು. ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‍ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ

ಸಹ್ಯಾದ್ರಿಯಲ್ಲಿ ಔರಾ 2023 – ಫ್ರೆಶರ್ಸ್ ಡೇ ಆಚರಿಸಲಾಯಿತು

ಔರಾ 2023 – ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಬ್ಯಾಚ್ 2022ರ ಫ್ರೆಶರ್ಸ್ ಡೇ ಅನ್ನು ಫೆಬ್ರವರಿ 7, 2023 ರಂದು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಗ್ಲೋಬಲ್ ಆರ್‌ಎಂಜಿ ಮುಖ್ಯಸ್ಥರಾದ ಶ್ರೀ ಚಕ್ರವರ್ತಿ ಇ.ಎಸ್. ಹಾಗೂ ಗೌರವ ಅತಿಥಿಗಳಾಗಿ ಶ್ರೀ ಎನ್. ಶಶಿಕುಮಾರ್ IPS, DIGP ಮತ್ತು ಪೊಲೀಸ್ ಆಯುಕ್ತರು, ಮಂಗಳೂರು ಇವರುಗಳು ಭಾಗವಹಿಸಿದರು.