ಮಂಗಳೂರು: ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ

ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯಿಂದ ಜೈಪುರ್ ಪುಟ್ಸ್ ಸಹಯೋಗದೊಂದಿಗೆ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಎಂಆರ್‍ಪಿಎಲ್ ಸಂಸ್ಥೆಯ ಉದ್ದಿಮೆಗಳ ಸಾಮಾಜಿಕ ಜವಾಬ್ದಾರಿ ವಿಭಾಗದಿಂದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ಜೈಪುರ್ ಫುಟ್ಸ್‍ನ ನುರಿತ ತಂತ್ರಜ್ಞರ ನೇತೃತ್ವದಲ್ಲಿ ಅಕ್ಟೋಬರ್ ತಿಂಗಳಲ್ಲಿ ಶಿಬಿರವನ್ನು ಆಯೋಜಿಸಿದ್ದಾರೆ.

Male amputee with prosthesis in hospital. Man sitting on chair with nurse touching prosthetic limb. Female nurse working with male patient. Rehabilitation, recovery, improvement.

ಈ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವ ಫಲಾನುಭವಿಗಳು ತಮ್ಮ ವಿಳಾಸ, ದೂರವಾಣಿ ಸಂಖ್ಯೆ, ವಿಕಲಾಂಗತೆಯ ಸವಿವರದೊಂದಿಗೆ ತಮ್ಮ ಅರ್ಜಿಯನ್ನು ಎಕ್ಸಿಕ್ಯೂಟಿವ್ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕುತ್ತೆತ್ತೂರು ಪೋಸ್ಟ್ & ವಿಲೇಜ್ ಕಾಟಿಪಳ್ಳ 575030ಗೆ ಸೆಪ್ಟಂಬರ್ 28ರೊಳಗೆ ಕಳುಹಿಸಬೇಕು. ಶಿಬಿರಾರ್ಥಿಗಳು ಬರಬೇಕಾದ ದಿನಾಂಕ, ಮತ್ತಿತ್ತರ ವಿವರಗಳನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 0824-2886058, 2179ಗೆ ಸಂಪರ್ಕಿಸವಹುದು.

Related Posts

Leave a Reply

Your email address will not be published.