Home Archive by category ಕರಾವಳಿ (Page 360)

ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಆಂಟನಿ ಫೆರ್ನಾಂಡಿಸ್ ನಿಧನ

ಮಂಗಳೂರು: ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆಂಟನಿ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.1936 ರಲ್ಲಿ ಉಡುಪಿ ಜಿಲ್ಲೆಯ ಕಳತ್ತೂರಿನಲ್ಲಿ ಜನಿಸಿದ ಅವರು ಶಿರ್ವ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ವಾರಣಾಸಿ

ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ – ಡಿವೈಎಫ್‌ಐ

ಫಾಝಿಲ್ ಕೊಲೆಯನ್ನು ಪ್ರತಿಕಾರದ ಕೊಲೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ, ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆಯು (ಇಂದು 3-2-23)ನಗರದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಶರಣ್ ಪಂಪ್ ವೆಲ್ ಹೇಳಿಕೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿಕೆ ನಾಗರೀಕ

ಸೌದಿ ಅರೇಬಿಯಾದಲ್ಲಿ ಭೀಕರ ವಾಹನ ಅಪಘಾತ; ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ನಾಲ್ವರು ಅನಿವಾಸಿಗಳ ಮೃತ್ಯು

ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ ಹಳೆಯಂಗಡಿ ಬಳಿಯ ಕದಿಕೆ ನಿವಾಸಿ ರಿಝ್ವಾನ್(23) ಸುರತ್ಕಲ್ ಕೃಷ್ಣಾಪುರದ ಶಿಹಾಬ್, ಮಂಗಳೂರು ಬೆಂಗರೆ ನಿವಾಸಿ ಅಕೀಲ್ ಹಾಗು ಬಾಂಗ್ಲಾದೇಶದ ಇನ್ನೋರ್ವ ಪ್ರಜೆ ನಾಸೀರ್ ಎಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸೌದಿ

ಜಪ್ಪಿನಮೊಗರವಿನ ಗ್ಯಾರೇಜ್‍ವೊಂದರಲ್ಲಿ ಆಕಸ್ಮಿಕ ಬೆಂಕಿ

ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನಮೊಗರಿನ ಗ್ಯಾರೇಜ್‍ವೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಗ್ಯಾರೇಜ್‍ನ ಮುಂದೆ ದುರಸ್ತಿಗಾಗಿ ನಿಲ್ಲಿಸಲಾಗಿದ್ದ ಹಳೆಯ ಬಸ್ ಮತ್ತಿತರ ಕೆಲವು ವಾಹನಗಳು ಸಂಪೂರ್ಣ ಬೆಂಕಿಯ ರಭಸಕ್ಕೆ ಸುಟ್ಟು ಭಸ್ಮ ಆಗಿವೆ.ರಾತ್ರಿ 10.45 ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ರು ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿ

ಪತ್ರಕರ್ತರ ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣ : ಪತ್ರಕರ್ತರ ನಿಯೋಗದಿಂದ ರಕ್ಷಣೆ ನೀಡುವಂತೆ ಆಗ್ರಹ

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪತ್ರಕರ್ತರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿ, ಪತ್ರಕರ್ತರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು. ಟೋಲ್‍ಗೇಟ್‍ಗಳಲ್ಲಿ ಸಿಬ್ಬಂದಿಗಳು ಪತ್ರಕರ್ತರು ಸಹಿತ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವ ಕೃತ್ಯಗಳು ಹೆಚ್ಚಿವೆ.

ಮೂಡುಬಿದರೆ : ಧೂಳು ಬರುವ ಹಾಗೆ ವಾಹನ ಚಾಲಾಯಿಸಬೇಡ ಎಂದಾತನ ಕೊಲೆ

ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ ನಿಧಾನವಾಗಿ ಹೋಗೆಂದು ಹೇಳಿದ ವ್ಯಕ್ತಿಗೆ ಟಿಪ್ಪರ್ ಚಾಲಕ ರಾಡ್ ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಕೊಲೆ ನಡೆಸಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಹತ್ಯೆಗೀಡಾದ ವ್ಯಕ್ತಿ. ಪಯಾಜ್ ಶುಕ್ರವಾರ ಕೋಟೆಬಾಗಿಲು ಮಸೀದಿಗೆ ನಮಾಝ್‍ಗೆ ತೆರಳುವ ಸಂಧರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಹಾರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು

ಐಕಳಭಾವ ಜೋಡುಕರೆ ಕಂಬಳ ವೀಕ್ಷಣೆಗೆ ಸೈಕಲಿನಲ್ಲಿ ಬಂದ ಪಂಜಾಬ್ ಯೂಟ್ಯೂಬರ್

ಕಿನ್ನಿಗೋಳಿ: ಸಾವಿರಾರು ಕಿಲೋಮೀಟರ್ ಸೈಕಲ್ ನಿಂದ ಇಡೀ ದೇಶದ ಗಡಿಭಾಗ ಮತ್ತು ಕರಾವಳಿ ಕರ್ನಾಟಕದ ಕಡಲು ತೀರ ಹಾಗೂ ಅನೇಕ ಭಾಗಗಳಲ್ಲಿ ತಿರುಗಾಟ ಮಾಡಲಿದ್ದಾರೆ, ಪ್ರಸ್ತುತ ಕಿನ್ನಿಗೋಳಿ ಸಮೀಪದ ಐಕಳಕ್ಕೆ ತಲುಪಿದ್ದು ಹಾಗಾದರೆ ನೀವು ಯಾರು ಅಂತ ಕೇಳುತ್ತೀರಾ ಅವರೇ ಪಂಜಾಬ್ ಮೂಲದ ಇಬ್ಬರು ಯೂಟ್ಯೂಬರ್ ಆಗಿರುವಂತಹ ಗುರುವಂದರ್ ಮತ್ತು ವಿಕಾಸ್.ಅವರು ಪಂಜಾಬಿನಿಂದ ಸಪ್ಟೆಂಬರ್ 24ರಂದು 2022 ಪ್ರಾರಂಭಿಸಿದು ಈಗಾಗಲೇ 4 ತಿಂಗಳು ಕಳೆದಿದೆ ತಮ್ಮ ಪ್ರಯಾಣ ಮೂರು

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಪರೂಪದ ರಕ್ತದ ಗುಂಪಿನ ಬಾಂಬೆ ಫಿನೋಟೈಪ್ ಹೊಂದಿರುವ ಮಹಿಳೆಯ ಯಶಸ್ವಿ ನಿರ್ವಹಣೆ

ಮಣಿಪಾಲ, 3ನೇ ಫೆಬ್ರವರಿ 2023:ರಕ್ತದ ಗುಂಪು O ನೆಗೆಟಿವ್ ಆಗಿದ್ದು ಹಾಗೂ ಆಂಟಿಬಾಡಿ ಇದೆಯೆಂದು ಮುಂದಿನ ನಿರ್ವಹಣೆಗಾಗಿ ಗರ್ಭಿಣಿ ಮಹಿಳೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಲಾಗಿತ್ತು. ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪು ಇರುವುದು ಕಂಡುಬಂದಿತು. ಇಂತಹ ಸಂದರ್ಭದಲ್ಲಿ ಆಂಟಿ ‘ಡಿ’ ಆಂಟಿಬಾಡಿ ಇರುವಿಕೆಯನ್ನುಪರೀಕ್ಷೆ ಮಾಡಲು ತುಂಬಾ ಕಷ್ಟ. ರಕ್ತದ ಉನ್ನತ

ಫೆ.5ರಿಂದ 9ರ ವರೆಗೆ ಕರಾವಳಿಯಲ್ಲಿ ಪ್ರಜಾಧ್ವನಿ ಯಾತ್ರೆ

ಕರಾವಳಿ ಭಾಗದಲ್ಲಿ ಫೆ.5ರಿಂದ 9ರವರೆಗೆ ಪ್ರಜಾಧ್ವನಿ ಯಾತ್ರೆ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು ಎಂದು ಮಾಜಿ ಸಚಿವ ಹಾಲಿ ಶಾಸಕ ಹಾಗೂ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆ ಫೆ.5ರಂದು ಸುಳ್ಯದಿಂದ ಆರಂಭಗೊಂಡು ಫೆ.6ರಂದು ಮೂಡಬಿದಿರೆ, ಫೆ.7ರಂದು ಕಾಪು, ಫೆ.8ರಂದು ಕುಂದಾಪುರ, ಫೆ.9ರಂದು ಶೃಂಗೇರಿ ತಲುಪಲಿದೆ ಎಂದರು.

ಮಂಗಳೂರಿನಲ್ಲಿ ಜುವೆಲ್ಲರಿ ಶಾಪ್ ಗೆ ನುಗ್ಗಿ ವ್ಯಕ್ತಿಯ ಕೊಲೆ

ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ.