ಕಾಸರಗೋಡು: ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ, ಸಾಮೂಹಿಕ ಅಶ್ವತ್ಥನಾರಾಯಣ ಪೂಜೆ

ಕಾಸರಗೋಡಿನ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿ ಹಾಗೂ ಹೊಸಂಗಡಿಯ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ ಮತ್ತು ಸಾಮೂಹಿಕ ಅಶ್ವತ್ಥನಾರಾಯಣ ಪೂಜೆಯು ಹೊಸಂಗಡಿಯ ಪ್ರೇರಣಾ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯಿತು.

ಸಕಲ ದೇವತೆಗಳು ನೆಲೆಸಿರುವ ದೇವ ಸ್ವರೂಪದ ಮರವೆಂದೇ ಪೂಜಿಸಲ್ಪಡುವ ಸರ್ವ ದೋಷಗಳನ್ನೂ ಸಕಲ ರೋಗಗಳನ್ನೂ ನಿವಾರಣೆಗೊಳಿಸಬಲ್ಲ ಅತ್ಯಂತ ಪವಿತ್ರ ಅಶ್ವತ್ಥವೃಕ್ಷದ ಶ್ರೀ ಅಶ್ವತ್ಥೋಪನಯನ, ವಿವಾಹೋತ್ಸವ ಮತ್ತು ಸಾಮೂಹಿಕ ಅಶ್ವತ್ಥನಾರಾಯಣ ಪೂಜೆಯು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.

ಇಂದು ಬೆಳಿಗ್ಗೆ ಗಣಪತಿ ಹೋಮ ನಂತರ ತುಲಾಲಗ್ನ ಸುಮುಹೂರ್ತದಲ್ಲಿ ಅಶ್ವತ್ಥೋಪನಯನ, ಅಶ್ವತ್ಥ ವಿವಾಹೋತ್ಸವ ಮತ್ತು ಅಶ್ವತ್ಥನಾರಾಯಣ ಪೂಜೆ ಜರಗಿತು

Related Posts

Leave a Reply

Your email address will not be published.