Home Archive by category HASANA (Page 2)

ಅರಕಲಗೂಡು: ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ, ಮೃತದೇಹ ಅರಣ್ಯ ಪ್ರದೇಶದಲ್ಲಿ ಪತ್ತೆ

ಅರಕಲಗೂಡು:  ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮೃತದೇಹವನ್ನು ತಾಲೂಕಿನ ಮಲ್ಲಾಪುರ ಬಳಿ ಲಕ್ಕೂರು ಅರಣ್ಯ ಪ್ರದೇಶದಲ್ಲಿ ಎಸೆದಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜಗದೀಶ್ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ,ಮೃತದೇಹದ ಪಕ್ಕದಲ್ಲಿ ಆಟೋ ನಿಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು

ಆಲೂರಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾದ ಮದ್ಯ ಮಾರಾಟ: ಗ್ರಾಮಸ್ಥರ ಆಕ್ರೋಶ

ಆಲೂರು : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಮಾರಾಟವಾಗುತ್ತಿರುವುದರಿಂದ ಮದ್ಯ ಸೇವನೆಯಿಂದ ತಾಲೂಕಿನಲ್ಲಿ ಒಂದೇ ತಿಂಗಳಿಗೆ 3 ಜನ ಅಮಾಯಕರು ಮೃತಪಟ್ಟಿರುವ ಘಟನೆ ತಾಲೂಕಿನ ಕೆ.ಹೊಸಕೋಟೆ ಹೊಬಳಿ ಮಲಗಳಲೆ ಗ್ರಾಮದಲ್ಲಿ ನಡೆದಿದೆ. ಅಬಕಾರಿ ಇಲಾಖೆ ಭ್ರಷ್ಟ ಅಧಿಕಾರಿಗಳ ಹಾಗೂ ಉಳ್ಳವರ ಶಕ್ತಿಯಿಂದ ಮದ್ಯ ಮಾರಾಟ ಮಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದು ಕುಡುಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮದ್ಯ

ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮುಂದುವರಿಯಲಿದೆ: ಸಚಿವ ಕೆ ಗೋಪಾಲಯ್ಯ

ಹಾಸನ :ಮುಂದಿನ ಅವಧಿಯ 21 ತಿಂಗಳು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಮುಂದುವರಿಯಲಿದೆ ಇದರಲ್ಲಿ ಯಾವುದೇ ಗೊಂದಲ ಬೇಡ  ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟಪಡಿಸಿದರು. ನಗರದಲ್ಲಿ 75ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರದಲ್ಲಿ ಇರಲಿದ್ದಾರೆ . ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿಯ

ಅರಸೀಕೆರೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ

ಹಾಸನ: ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ. ನವಾಜ್ (27) ಕೊಲೆಯಾದ ರೌಡಿಶೀಟರ್. ಹಾಸನ ಜಿಲ್ಲೆಯ ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೆಹಳ್ಳಿ ಸಮೀಪ ನಡೆದಿದೆ. ಮೂರು ವರ್ಷಗಳ ಹಿಂದೆ ಮೀನು ಹಿಡಿಯುವ ಸಂಬಂಧ ಎರಡು ಯುವಕರ ತಂಡದ ನಡುವೆ ಗಲಾಟೆ ನಡೆದು ಕೊನೆಗೆ ಆಂಬುಲೆನ್ಸ್ ಚಾಲಕ ಅರುಣ್ ಎಂಬುವನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಚಾಕು

ಬೇಲೂರಿನಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಬೇಲೂರಿನ ಚೆನ್ನಕೇಶವ ದೇವಾಲಯ ಮುಂಭಾಗದಿಂದ 20 ಹೆಚ್ಚು ಟ್ಯಾಕ್ಟರ್ ಗಳ ಸಮೇತ ಪ್ರತಿಭಟನ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಕೇಂದ್ರ ಸರ್ಕಾರವು ಸಾಕಷ್ಟು ರೈತರು ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಕೂಡ ರೈತರ ಸಂಕಷ್ಟದಲ್ಲಿದ್ದರೂ ಸಾಲ ಮನ್ನಾ ಮಾಡದೆ ರೈತರನ್ನು

ಬೇಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

ಬೇಲೂರು ತಾಲೂಕಿನ ಮಲೆನಾಡು ಪ್ರದೇಶವಾದ ಅರೆಹಳ್ಳಿ ಮತ್ತು ಬಿಕ್ಕೋಡು ಹೋಬಳಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸುಂಡೆಕೆರೆ ಹಾಗೂ ನಾರ್ವೆ ಪೇಟೆ ಸಂಪರ್ಕಿಸುವ ಸೇತುವೆ ಮುಳುಗಡೆ ಯಾಗಿದೆ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಹಾಗೂ ರಸ್ತೆಬದಿಯ ಮರಗಳು ನೆಲಕಚ್ಚಿದ್ದು ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ ಕೆರೆ-ಕಟ್ಟೆ

ಸಕಲೇಶಪುರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್. ಅಶೋಕ್, ಗೋಪಾಲಯ್ಯ ಭೇಟಿ, ಪರಿಶೀಲನೆ

ಹಾಸನ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಹಾಸನ ಸಕಲೇಶಪುರದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಇಂದು ಕಂದಾಯ ಸಚಿವ ಆರ್ ಆಶೋಕ್ ಮತ್ತು ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಭೇಟಿ ನೀಡಿ ಅತಿವೃಷ್ಠಿ ಪ್ರದೇಶವನ್ನು ಪರಿಶೀಲಿಸಿದರು. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್ 75 ರಲ್ಲಿ ಆಗಿರುವ ಭೂ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಆದಷ್ಟು ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸುವಂತೆ ಸೂಚಿಸಿದರು. ಅತೀವೃಷ್ಠಿ

ಆಲೂರಿನಾದ್ಯಂತ ಭಾರೀ ಮಳೆ: ರೈತರ ಜಮೀನಿಗೆ ನುಗ್ಗಿದ ನೀರು

ಆಲೂರು: ಆಲೂರು ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ತಾಲೂಕು ಪಾಳ್ಯ ಹೋಬಳಿ ಮಡಬಲು ಗ್ರಾಮದ ಚಂದ್ರಶೇಖರ್ ಎಂಬುವವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಶಂಕುತೀರ್ಥ ಹೊಳೆಯ ನೀರು ದಿಢೀರನೆ ನುಗ್ಗಿದ ಪರಿಣಾಮವಾಗಿ ಶುಂಠಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಅಲ್ಲದೆ ಭತ್ತದ ನಾಟಿಗಾಗಿ ಸಿದ್ದಪಡಿಸಿದ್ದ ಸಸಿಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಸಂಗ ತಾಲೂಕಿನಲ್ಲಿ ನಡೆದಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ

ಬೈಲೂರಿನಲ್ಲಿ ಅಧಿಕಾರಿಗಳ ಮೌನಕ್ಕೆ ಬಲಿಯಾದ ರಂಗಮಂದಿರ

ಇದು ಇತಿಹಾಸ ಕಂಡಿರುವ ಪುರಾತನ ಮಂಟಪ, ಈ ಮಂಟಪ ಇರುವುದು ಯಾವುದು ಕುಗ್ರಾಮದಲ್ಲಿ ಅಲ್ಲ ಬದಲಾಗಿ ಇತಿಹಾಸ ಪ್ರಸಿದ್ಧ ಶಿಲ್ಪ ಕಲೆಗಳ ತವರೂರೆಂದೇ ಪ್ರಖ್ಯಾತ ಗೊಂಡಿರುವ ಊರಿನಲ್ಲಿ, ಅನೇಕ ಭಾರಿ ಈ ಮಂಟಪವನ್ನು ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ಈ ಭಾಗದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ. ವಿಶ್ವ ವಿಖ್ಯಾತ ಬೇಲೂರು ಯಾರಿಗೆ ತಾನೆ ಗೊತ್ತಿಲ್ಲ ಹೇಳ್ರಿ,, ಈ ಪುಣ್ಯ ಕ್ಷೇತ್ರದ ದರ್ಶನಕ್ಕೆ

ಬೇಲೂರಿನಲ್ಲಿ ಅನಾಥ ಶವ ಅಂತ್ಯಸಂಸ್ಕಾರ

ಬೇಲೂರು ಪಟ್ಟಣ ಜೂನಿಯರ್ ಕಾಲೇಜು ಮೈದಾನದ ರಂಗ ಮಂಟಪದ ಜಗಲಿಯ ಮೇಲೆ ಮರಣ ಹೊಂದಿದ್ದ ಅನಾಥ ಶವವನ್ನು ಬೇಲೂರು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಬೇಲೂರು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ, ಹಿಂದೂ ಸಂಪ್ರದಾಯದಂತೆ ತಾಲೂಕು ಆಡಳಿತ ಸಹಕಾರದೊಂದಿಗೆ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜತೆ ಸೇರಿ ’ಗೌರವಯುತ’ ಶವಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಡಾ. ರಮೇಶ್, ಸಂಪತ್ ಮಾಸ್ಟರ್, ಸಾಮಾಜಿಕ ಹೋರಾಟಗಾರ ಪತ್ರಕರ್ತ ನೂರ್ ಅಹಮದ್