ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ- ಸಾಗರದಂತೆ ಹರಿದು ಬಂದ ಜನಕೋಠಿ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಮಾಡಲು ಇಂದು ಏಳನೇ ದಿನವಾಗಿದ್ದು ಲಕ್ಷೋಪಲಕ್ಷ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ ಈಗಾಗಲೇ ಹಲವಾರು ಗಣ್ಯಾತಿ ಗಣ್ಯರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.

ಪ್ರತಿದಿನವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ದೇವಿಯ ಮಹಿಮೆ ಹೆಚ್ಚಾಗುತ್ತಿದ್ದು, ಸಚಿವರಾಗಲಿ ಅಥವಾ ರಾಜಕೀಯ ಗಣ್ಯಾತಿಗಣ್ಯರು ಭೇಟಿ ನೀಡುತ್ತಿದ್ದಾರೆ ಈಗಾಗಲೇ ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು 9 ಜನ ನವದುರ್ಗೆಯರು ಹಾಸನದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ ಹಾಗಾಗಿಯೇ ವರ್ಷಕ್ಕೊಮ್ಮೆ ಬಾಗಿಲು ತೆರೆಯುವÀ ಹಾಸನಾಂಬೆ ದರ್ಶನ ಮಾಡಲು ಸಾಗರೋಪಾದಿಯಲ್ಲಿ ಜನರು ಬರುತ್ತಿದ್ದಾರೆ

ನೂತನವಾಗಿ ಹಾಸನ ಜಿಲ್ಲೆಗೆ ಬಂದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರು ಹಾಸನ ಜಿಲ್ಲೆಗೆ ಹೊಸಬರಾದರೂ ತುಂಬಾ ಅಚ್ಚುಕಟ್ಟಾಗಿ .ಬರುತ್ತಿರುವ ಭಕ್ತಾಧಿಗಳಿಗೆ ದರ್ಶನವನ್ನು ದೊರಕಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ ಬರುವ ಎಲ್ಲಾ ಭಕ್ತಾದಿಗಳನ್ನು ಸಹ ಸಾವಧಾನವಾಗಿ ದರ್ಶನ ಮಾಡುವಂತೆ ತಿಳಿಸಿದ್ದಾರೆ ಜಿಲ್ಲೆಗೆ ಹೊಸದಾಗಿ ಬಂದಿದ್ದರು ಸಹ ಜಿಲ್ಲೆಯ ಬಗೆಗೆ ಅವರಿಗಿರುವ ಕಾಳಜಿ ಮತ್ತು ಅಭಿಮಾನವನ್ನು ಕಂಡು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ
ಹಾಸನಾಂಬ ದೇವಸ್ಥಾನದ ದರ್ಶನ ಅವದಿ ರಾತ್ರಿ 12 ಗಂಟೆ ವರಗೆ ವಿಸ್ತರಣೆ ಮಾಡುವುದ್ದಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಘೋಷಿಸಿದೆ.
