ಹಾಸನ : ಎ.ಐ.ಸಿ.ಸಿ ರಾಷ್ಟಿಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಿಂದ ಎ.ಐ.ಸಿ.ಸಿ ರಾಷ್ಟಿçÃಯ ಅಧ್ಯಕ್ಷರಾಗಿ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಹುಮತದೊಂದಿಗೆ ಆಯ್ಕೆ ಮಾಡಿರುವುದಕ್ಕೆ ನಗರದ ಕೇಂದ್ರ ಭಾಗದಲ್ಲಿ ಪಟಾಕಿ ಸಿಡಿಸಿ ,ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗನಾಥ್ ಅವರು ಮಾತನಾಡಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ರಾಷ್ಟಿಯ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿಯನ್ನಾಗಿ ಮಾಡುವವರೆಗೂ ನಮ್ಮ ಹೋರಾಟದ ಜೊತೆಗೆ ಸಮತ ಬೆಂಬಲವಿರುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು. ರಾಷ್ಟಿಯ ಆದ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ತಾಲೂಕಿನ ಎಲ್ಲಾ ಕಾರ್ಯಕರ್ತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

malikarjun karge

ಇದೇ ಸಂಧರ್ಭದಲ್ಲಿ ಆಲೂರು ಸಕಲೇಶಪುರ ಕಟ್ಟಾಯ ಕ್ಷೇತ್ರ ಕಾಂಗ್ರೇಸ್ ಮುಖಂಡರಾದ ಮುರುಳಿ ಮೋಹನ್ , ಕಾಂಗ್ರೆಸ್ ಮುಖಂಡರುಗಳಾದ ಶಾಂತಕೃಷ್ಣ.ಶಿವಮೂರ್ತಿ.ಟೀಕರಾಜ್.ರoಗೇಗೌಡ.ರoಗಯ್ಯ.ಧರ್ಮಯ್ಯ.ಲೋಕೇಶ್ ಅಜ್ಜೇನಹಳ್ಳಿ.ಶಿವಣ್ಣ.ಲೋಹಿತ್ ಹಸಗನೂರು. ಮಹೇಶ್.ಭೈರಯ್ಯ.ಅರಸಯ್ಯ.ಮುಸ್ಲೀಂ ಹಿರಿಯ ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.