ಚಲೋ ಕಾರ್ಡ್‍ನಲ್ಲಿ ವಿದ್ಯಾರ್ಥಿಗಳಿಗೆ ಶೇ.50 , ನಿತ್ಯ ಪ್ರಯಾಣಿಕರಿಗೆ ಶೇ.20 ರಿಯಾಯಿತಿ

ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾಸಗಿ ಬಸ್‍ಗಳಲ್ಲಿ ಶೇ.50 ರಿಯಾಯಿತಿ, ನಿತ್ಯ ಪ್ರಯಾಣಿಕರಿಗೆ ಶೇ.20 ರಿಯಾಯಿತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೆ, ಲಾಭ-ನಷ್ಟಗಳನ್ನು ನೋಡದೆ ಈ ಸೌಲಭ್ಯವನ್ನು ಚಲೋ ಬಸ್ ಕಾರ್ಡ್‍ನ ಮುಖಾಂತರ ನೀಡುತ್ತಿದ್ದು, ಇದು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈಗಾಗಲೇ 25,000 ಅಧಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಎಂದು ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ.ಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

chalo card

ಚಲೋ ಕಾರ್ಡ್ ಸಂಸ್ಥೆಯ ಮೂಡುಬಿದಿರೆ ಪ್ರಬಂಧಕ ಶಿವರಾಜ್ ಮಾಹಿತಿ ನೀಡಿ, ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಅಥವಾ ಶುಲ್ಕ ಪಾವತಿಸಿದ ಇತ್ತೀಚಿನ ರಶೀದಿಯೊಂದಿಗೆ ಚಲೋ ಕಾರ್ಡ್ ಕೇಂದ್ರಗಳಲ್ಲಿ ಬಸ್ ಪಾಸ್ ಮಾಡಿಸಿಕೊಳ್ಳಬಹುದು. ಮೂಡುಬಿದಿರೆ ತಾಲೂಕು ಏಳು ಕಡೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಚಲೋ ಕೇಂದ್ರಗಳಿದ್ದು, ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಸ್ ಪಾಸ್ ಸಂಬಂಧಿಸಿದ ಯಾವುದೇ ಮಾಹಿತಿಗಳಿಗಾಗಿ ಚಲೋ ಸಹಾಯವಾಣಿ 9141134640ಗೆ ಸೋಮವಾರದಿಂದ ಶನಿವಾರದವರೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸಪಳಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Related Posts

Leave a Reply

Your email address will not be published.