ತುಳು ಎಂ.ಎ. : ಚಂದ್ರಹಾಸ ಕಣಂತೂರು ಪ್ರಥಮ ರ್‍ಯಾಂಕ್

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ತುಳು ಎಂ.ಎ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಂದ್ರಹಾಸ ಕಣಂತೂರು ಅವರು ಪ್ರಥಮ ರ್‍ಯಾಂಕ್ ಪಡೆದಿರುತ್ತಾರೆ. ಹಂಪನಕಟ್ಟೆಯ ಮಂಗಳೂರು ವಿ.ವಿ.ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ಚಂದ್ರಹಾಸ ಕಣಂತೂರು ಅವರು ತುಳು ಬರಹಗಾರರಾಗಿ , ವಾಗ್ಮಿಯಾಗಿ ಖ್ಯಾತಿ ಪಡೆದವರು. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಲೆಕ್ಕಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಚಂದ್ರಹಾಸ ಕಣಂತೂರು ಅವರು ಸೇವಾ ನಿವೃತ್ತಿಯ ಬಳಿಕ ಹಂಪನಕಟ್ಟೆಯ ವಿ.ವಿ.ಸಂಧ್ಯಾ ಕಾಲೇಜಿಗೆ ತುಳು ಎಂ.ಎ ವಿದ್ಯಾರ್ಥಿಯಾಗಿ ಸೇರ್ಪಡೆಯಾಗಿದ್ದರು. ಚಂದ್ರಹಾಸ ಅವರು ಸಾಹಿತಿಯಾಗಿ , ಹವ್ಯಾಸಿ ರಂಗಭೂಮಿ ಕಲಾವಿದರಾಗಿ , ಆಕಾಶವಾಣಿ ತುಳು ವಾರ್ತಾ ವಾಚಕರಾಗಿ, ಯಕ್ಷಗಾನ ಕಲಾವಿದರಾಗಿ ಸಂಘಟಕರಾಗಿ ಜನಮನ್ನಣೆ ಪಡೆದವರು. ಅನೇಕ ತುಳು, ಕನ್ನಡ ಕೃತಿಗಳನ್ನು ರಚಿಸಿ ಸಾಹಿತ್ಯ ಕೃಷಿ ಮಾಡಿದವರು .

ಪ್ರಕಟಿತ ಕೃತಿಗಳು :
ಚಂದ್ರಹಾಸ ಕಣಂತೂರು ಅವರ ಪ್ರಕಟಿತ ಕೃತಿಗಳು ಈ ರೀತಿಯಾಗಿದೆ.

  • ವೃತ್ತಾಂತ ( ಕವನ ಸಂಕಲನ) , *ಕಣಂತೂರು ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ (ಕ್ಷೇತ್ರ ಅಧ್ಯಯನ), *ಮೈಮೆ(ಒಂಜಿ ಕೋಪೆ ಪಾಡ್ದನದ ಕತೆಕುಲು), *ತುಳು ಬಾಸೆದ ತಿರ್ಲು (ತುಳು ವ್ಯಾಕರಣ – ಕೆ.ಟಿ.ಆಳ್ವಾರ ಜೊತೆಗೆ), *ಪಂಚ ದ್ರಾವಿಡ ಭಾಷಾ ಜನಪದ ಕತೆಗಳು(ಪ್ರಕಟಣೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ).
    ‘ಪರತಿ ಮಂಗಣೆ ‘ ಕತೆಯು ಮಂಗಳೂರು ವಿಶ್ವವಿದ್ಯಾನಿಲಯದ ದ್ವಿತೀಯ ಪದವಿ ತರಗತಿಯ ಪಠ್ಯಕ್ಕೆ ಸೇರ್ಪಡೆಗೊಂಡಿದೆ

Related Posts

Leave a Reply

Your email address will not be published.