ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ; ಮಾ.5 ರಿಂದ 13 ರವರೆಗೆ ಬ್ರಹ್ಮಕಲಶ ಮತ್ತು ಜಾತ್ರಾ ಮಹೋತ್ಸವ

ಚಿತ್ರಾಪುರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇಲ್ಲಿನ ಜೀರ್ಣೋದ್ಧಾರಕ್ಕೆ ಸರ್ವ ಭಕ್ತರು ಕೈ ಜೋಡಿಸಿ ದೇವಸ್ಥಾನವನ್ನು ಐತಿಹಾಸಿಕವಾಗಿ ಬೆಳಗಿಸಿ ಶ್ರೀ ದೇವಿಯ ಆಶೀರ್ವಾದ ಪಡೆಯುವಂತಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬ್ರಹ್ಮಕಲಶಾಧಿ ದಾರ್ಮಿಕ ಸೇವಾ ಕಾರ್ಯಗಳು ಮಾ.5 ರಿಂದ 13 ರವರೆಗೆ ಜರಗಲಿದ್ದು ,13 ರಂದು ಬ್ರಹ್ಮಕಲಶ ಮತ್ತು 14 ರಿಂದ ಜಾತ್ರಾ ಮಹೋತ್ಸವ ಜರಗಲಿದೆ.ಇದಕ್ಕೆ ಪೂರ್ವಭಾವಿಯಾಗಿ ನ.28ರಂದು ಧ್ವಜ ಪ್ರತಿಷ್ಪಾಪನಾ ಕಾರ್ಯ ನಡೆಯಲಿದೆ.ಎಲ್ಲಾ ದೇವತಾ ಕಾರ್ಯಕ್ರಮಗಳಿಗೆ ಊರಿನ ಗ್ರಾಮಸ್ಥರು ಸ್ವಯಂ ಸೇವಕರಾಗಿ ಆಗಮಿಸಿ ದೇವರ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜೀರ್ಣೋದ್ದಾರ ಸಮಿತಿ ಸಂಚಾಲಕರಾದ ಉಮೇಶ್ ಟಿ.ಕರ್ಕೇರ ಅವರು ದಾನಿಗಳ ಹಾಗೂ ಸರಕಾರದ 2 ಕೋಟಿ ರೂ.ನೆರವು ದೊರಕಿದ್ದು ಅಂದಾಜು 12 ಕೋಟಿ ರೂ.ಗಳ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯುತ್ತಿದೆ.ಶಾಸಕರ ನೇತೃತ್ವದಲ್ಲಿ ಸಂಸದರ ಸಹಕಾರದಲ್ಲಿ ರಾಜ್ಯ ಸರಕಾರ ಅನುದಾನ ನೀಡಿದೆ.ನಾಡೋಜ ಜಿ.ಶಂಕರ್ ,ಪ್ರಕಾಶ್ ಶೆಟ್ಟಿ ಹಾಗೂ ಊರಿನ ಭಕ್ತ ಕುಟುಂಬಗಳು ಒಂದೊಂದು ದೇವರ ,ದೈವದ ಗುಡಿಗಳನ್ನು ಸೇವಾರ್ಥವಾಗಿ ನಿರ್ಮಿಸಿ ಕೊಡುವ ಸಂಕಲ್ಪದಂತೆ ಗುಡಿಯ ಕೆಲಸ ಭರದಿಂದ ನಡೆಯುತ್ತಿದೆ ಎಂದರು.

ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರುಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರ ದಲ್ಲಿ ಶಾಸಕರಾದಿಯಾಗಿ , ಊರಿನ ಮೊಗವೀರ ಬಾಂಧವರು,ಭಕ್ತಾದಿಗಳು ಎಲ್ಲರೂ ಒಗ್ಗೂಡಿ ಮಾಡುವ ಸೇವಾ ಕಾರ್ಯದಿಂದ ದೇವಿಯು ಪ್ರಸನ್ನಳಾಗಿ ಎಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ.ಬ್ರಹ್ಮಕಲಶೋತ್ಸವದಲ್ಲಿಯೂ ಎಲ್ಲರ ಸಹಕಾರ ,ಸೇವೆಯಿರಲಿ ಎಂದರು.ಮನಪಾ ಸದಸ್ಯೆ ಸುಮಿತ್ರ ಕರಿಯ, ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್ ಬೈಂಪಾಡಿ, ಪ್ರಧಾನ ಕಾರ್ಯದರ್ಶಿ ಗಣೇಶ ಹೊಸಬೆಟ್ಟು, ಲೆಕ್ಕಾಧಿಕಾರಿ ಎಚ್.ಎಲ್ ರಾವ್,ಉಪತಹಶೀಲ್ದಾರ್ ನವೀನ್ ಕುಮಾರ್ ಹಾಗೂ ಪದಾಧಿಕಾರಿಗಳು,ಊರಿನ ಗ್ರಾಮಸ್ಥರು,ವಿವಿಧ ಮೊಗವೀರ ಮಹಾಸಭಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.