ದೀನದಯಾಳ್ ಸಹಕಾರ ಸಂಘದ ವತಿಯಿಂದ ಭಾರತ್ ವನ್ ಜನಸಂಪರ್ಕ ಕೇಂದ್ರ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ

ಸುಳ್ಯ ಮಾಜಿ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಕಾರ್ಯಾಚರಿಸುವ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಎ.16ರಂದು ನಡೆಯಿತು.

ಸ್ವಸಹಾಯ ಸಂಘಗಳನ್ನು ನ.ಪಂ.ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಉದ್ಘಾಟಿಸಿದರು. ಭಾರತ್ ವನ್ ಜನಸಂಪರ್ಕ ಕೇಂದ್ರವನ್ನು ತಹಶೀಲ್ದಾರ್ ಎಂ.ಮಂಜುಳ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಅಂಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಪಾಲು ಬಂಡವಾಳ ಪ್ರಮಾಣ ಪತ್ರ ವಿತರಿಸಿದರು.


ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಶುಭ ಹಾರೈಸಿದರು. ನೆಲ್ಲೂರು ಕೆಮ್ರಾಜೆ ಗ್ರಾಮದ ಚಿಗುರು ಸ್ವಸಹಾಯ ಸಂಘ, ಅಮರಮುಡ್ನೂರು ಚಿಕ್ಕಿನಡ್ಕದ ದೀಪಾ ಸ್ವಸಹಾಯ ಸಂಘ ಮತ್ತು ಅಶ್ವಿನಿ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು.
ಸಂಘದ ನಿರ್ದೇಶಕರಾದ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಶುಭಲತಾ ಮಾತ್ರಮಜಲು, ಮಹಾಬಲ ಪಡುಬೆಟ್ಟು, ಕುಂಞ ಕಮಿತ್ತಿಲು, ಬಾಳಪ್ಪ ಕಳಂಜ, ರವಿ ಕೆಳಗಿನಬೀಡು ಉಪಸ್ಥಿತರಿದ್ದರು. ನಿರ್ದೇಶಕ ಜಗನ್ನಾಥ ಜಯನಗರ ಸ್ವಾಗತಿಸಿದರು. ನಿರ್ದೇಶಕ ಸಂದೀಪ್ ಪಂಜೋಡಿ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದ 2ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀನದಯಾಳ್ ಸಹಕಾರ ಸಂಘ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ಒನ್ ಜನ ಸಂಪರ್ಕ ಕೇಂದ್ರ ಮಂಜೂರಾತಿಗೊಂಡಿರುತ್ತದೆ. ಸಹಕಾರ ಸಂಘದ ಕಛೇರಿಯ ಪಕ್ಕದಲ್ಲಿ ಜನ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಿಂದ ಕೊಡಲ್ಪಡುವ ಯೋಜನೆಗಳ ಸೌಲಭ್ಯವನ್ನು ಜನ ಸಾಮಾನ್ಯರಿಗೆ ಅತ್ಯಂತ ಸುಲಭದಲ್ಲಿ ತಲುಪಿಸುವ ಉದ್ದೇಶದಿಂದ ಕೇಂದ್ರವನ್ನು ತೆರೆತಲಾಗಿದೆ ಎಂದು ಎಸ್.ಅಂಗಾರ ತಿಳಿಸಿದ್ದಾರೆ.

Related Posts

Leave a Reply

Your email address will not be published.