ಮಂಗಳೂರು: ಅಸ್ತ್ರಗ್ರೂಪ್ ವತಿಯಿಂದ ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕೊಡೆ ಹಸ್ತಾಂತರ

ಅಸ್ತ್ರಗ್ರೂಪ್ ವತಿಯಿಂದ ಮಂಗಳೂರು ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ಕೊಡೆಗಳನ್ನು ಹಸ್ತಾಂತರಿಸಲಾಯಿತು.

ಸಾಮಾಜಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಿರುವ ಅಸ್ತ್ರಗ್ರೂಪ್ ವತಿಯಿಂದ ಟ್ರಾಫಿಕ್ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ಸುಮಾರು 300 ಕೊಡೆಗಳನ್ನು ಮಂಗಳೂರಿನ ಸಹಾಯಕ ಪೊಲೀಸ್ ಆಯುಕ್ತರಾದ ನಜ್ಮಾ ಫಾರೂಕಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಮತ್ತು ಯತೀಶ್ ಪೂಜಾರಿ ಅವರು ಕೊಡೆಗಳನ್ನು ಹಸ್ತಾಂತರಿಸಿದರು.
