ಕ್ರಿಮಿನಲ್ ಕೇಸ್ ದಾಖಲು : ಬಸ್ಸು ಮಾಲಕರ ಸಂಘದೊಂದಿಗೆ ಸಮಾಲೋಚನೆ

ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ನೇತೃತ್ವದಲ್ಲಿ ಉಳ್ಳಾಲ, ದೇರಳಕಟ್ಟೆ, ಮುಡಿಪು ಭಾಗದ ಬಸ್ಸು ಚಾಲಕ, ನಿರ್ವಾಹಕರ ನಿಯೋಗ ದ.ಕ. ಬಸ್ಸು ಮಾಲಕರ ಸಂಘದ ಕಚೇರಿಗೆ ಭೇಟಿ ನೀಡಿ ಮಾಲಕರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿತು.‌

ಇತ್ತೀಚೆಗೆ ಬಸ್ಸಿನಿಂದ ಆಕಸ್ಮಿಕವಾಗಿ ಪಿ ಯು ವಿದ್ಯಾರ್ಥಿ ಜಾರಿ ಬಿದ್ದು ಮೃತ ಪಟ್ಟ ಘಟನೆಯಲ್ಲಿ ಚಾಲಕ, ನಿರ್ವಾಹಕರ ಮೇಲೆ ಸೆಕ್ಷನ್ 304 ಹಾಕಿ ಜೈಲಿಗೆ ಕಳುಹಿಸಿದ ಪ್ರಕರಣದ ಕುರಿತು ಹಾಗೂ ಪೊಲೀಸರಿಂದ ಚಾಲಕ, ನಿರ್ವಾಹಕರಿಗೆ ಉಂಟಾಗುತ್ತಿರುವ ಕಿರುಕುಳ,ಅಭದ್ರತೆ, ಆತಂಕಗಳ ಕುರಿತು ಚರ್ಚಿಸಿತು. ಚಾಲಕ, ನಿರ್ವಾಹಕರ ರಕ್ಷಣೆಗೆ ಮುಂದಾಗುವಂತೆ ಮನವಿ ಸಲ್ಲಿಸಿತು. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಕಾರ್ಯದರ್ಶಿ ಪುತ್ರನ್ ಮನವಿ ಸ್ವೀಕರಿಸಿದರು‌

Related Posts

Leave a Reply

Your email address will not be published.