ದೇರಳಕಟ್ಟೆ :ಕಣಚೂರು ಸಂಸ್ಥೆಯೊoದಿಗೆ ಮೆಡ್ ಪಾರ್ಲಿಮೆಂಟ್ ಆರೋಗ್ಯ ರಕ್ಷಣೆ ಒಡಂಬಡಿಕೆ

ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ಸೇರಿದಂತೆ ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಸೈನ್ಸ್ನ ಶಿಕ್ಷಣದೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ತಂತ್ರಜ್ಞಾನದೊAದಿಗೆ ಆರೋಗ್ಯ ರಕ್ಷಣೆಗೆ ಬೇಕಾದ ಕೌಶಲ್ಯ ವೃದ್ಧಿ ಇಂದಿನ ಅಗತ್ಯಗಳಲ್ಲಿ ಒಂದಾಗಿದ್ದು, ಶಿಕ್ಷಣದೊಂದಿಗೆ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ, ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮೆಡ್ ಅಚೀವರ್ಸ್ ಗ್ರೂಪ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಡಾ| ಹರ್ಷ ವರ್ದನ್ ಅಭಿಪ್ರಾಯಪಟ್ಟರು.

ಅವರು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಎಂಡ್ ರಿಸರ್ಚ್ ಸೆಂಟರ್ (ಕಿಮ್ಸ್) ಇದರೊಂದಿಗೆ ಮೆಡ್ ಅಚೀವರ್ಸ್ನ ಮೆಡ್ ಪಾರ್ಲಿಮೆಂಟ್ ಮತ್ತು ವಿಶ್ವವಿದ್ಯಾಲಯ ಆರೋಗ್ಯ ರಕ್ಷಣಾ ಸಂಸ್ಥೆಗಳೊoದಿಗೆ ಶೈಕ್ಷಣಿಕ ಒಡಂಬಡಿಕೆ ಮತ್ತು ಆರೋಗ್ಯ ರಕ್ಷಣೆಗೆ ಕುರಿತಂತೆ ವಿವಿ` ವಿಷಯಗಳ ವಿಚಾರದಲ್ಲಿ ನಡೆದ ಶೈಕ್ಷಣಿಕ ಅಧಿವೇಶನವನ್ನು ಉದ್ಧೇಶಿಸಿ ಮಾತನಾಡಿದರು. ಕೋವಿಡ್ ನಂತರ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರರ ಆರೋಗ್ಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಇದಕ್ಕೆ ಸಂಬAಧಿಸಿದAತೆ ತಜ್ಞ ವೈದ್ಯರ ಸಲಹೆ ಸಹಕಾರ ಅಗತ್ಯವಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಇತರ ಆರೋಗ್ಯ ಸಂಬAಧ ಕೋರ್ಸುಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಈ ಒಡಂಬಡಿಕೆಯಿAದ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಅಧ್ಯಕ್ಷ ಯು. ಕಣಚೂರು ಮೋನು ಅಧ್ಯಕ್ಷಯಕ್ಷತೆ ವಹಿಸಿದ್ದರು. ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಡೀನ್ ಡಾ| ಕರ್ನಲ್ ಕೆ.ಸಿ. ಕಿರಣ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂಸತ್ ಮೆಡ್ ಅಚೀವರ್ಸ್ನ ಮೆಡ್ ಪಾರ್ಲಿಮೆಂಟ್‌ನ ತಜ್ಞರಾದ ಮೈಕೆಲ್ ಕೋಸ್, ಪ್ರೊ. ಡಾ. ಮಾರ್ಕ್ಪರಸೋನ್ಸ್, ಡಾ| ಡೆಮಿನ್ ಈಸ್ಟನ್, ಪ್ರೊ. ಡಾ ಆಂಡ್ರು÷್ಯ ಬಿವಾರ್ಡ್, ಡಾ| ಹೆನ್ರಿ ದೆ ಅಯಿಝ್‌ಪುರೊ, ಮ್ಯಾಥ್ಯು ಆಯಟ್‌ಕಿನ್ಸ್, ಡಾ| ಬ್ರೂಸ್‌ಇನ್‌ಗ್ರಾಂ ಓಅಮ್, ಮಾರ್ಕೂಸ್ ಬೆಸ್ಟ್, ಡಾ| ಜೋರ್ಜ್ಮುಕ್‌ನಿಕ್, ಡಾ| ಬಾಸ್ತಸ್ತ್ ದಹಾಲ್ ಮೌನ್, ಡಾ|ಪದ್ಮಾ ಗಡಿಯಾರ್, ನಿಕೋಲಾಸ್ ಹೊವಾರ್ಡ್, ಮುಕುಂದ್ ಕುಮಾರ್, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಯ ಕರ್ನಾಟಕ ಚಾಪ್ರ‍್ನ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಆಲಿ, ಕಣಚೂರು ಆಸ್ಪತ್ರೆಯ ವೈದ್ಯಕೀಯ ಅಧ್ಯಕ್ಷಕ ಡಾ| ಹರೀಶ್ ಶೆಟ್ಟಿ, ಕಣಚೂರು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸೊಹೈಲ್ ಉಪಸ್ಥಿತರಿದ್ದರು.

ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಅಬ್ದುಲ್ ರಹೆಮಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ವಂದಿಸಿದರು. ಪ್ರತಿಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
