ಪುರಸಭೆಯ ಪರವಾನಿಗೆ ಪಡೆಯದೆ ಕಾಲೇಜು ನಿರ್ಮಾಣ
ಮೂಡುಬಿದಿರೆ: ಪುರಸಭೆಯ ಷರತ್ತು ಉಲ್ಲಂಘನೆ ಮಾಡಿ ಸರಕಾರದ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಕಾನೂನು ಬಾಹಿರವಾಗಿ ಜರಾತುಲ್ ಕುರಾನ್ ಕುರಾನಿಕ್ ಫ್ರೀ ಸ್ಕೂಲ್ ಮತ್ತು ಆಲ್ ಮಫಾಝ್ ವುಮೆನ್ಸ್ ಶೆರಿಯತ್ ಕಾಲೇಜನ್ನು ನಿರ್ಮಾಣ ಮಾಡಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಮೂಡುಬಿದಿರೆ ಪುರಸಭೆಗೆ ಮನವಿ ನೀಡಿದರು.
ಹಿಂ.ಜಾ.ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ ಪುರಸಭೆಯ ಸಿಬಂದಿ ಸುದೀಶ್ ಹೆಗ್ಡೆ ಅವರ ಮೂಲಕ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿ ಆಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ನವರು ಪ್ರಾಂತ್ಯ ಗ್ರಾಮದ ಸರ್ವೆ ನಂಬರ್ ೨೦/೬ ರಲ್ಲಿ ೦.೧೭.೧೭ ಎಕ್ರೆ ಜಮೀನಿನಲ್ಲಿ ವಾಸ್ತವ್ಯಕ್ಕೆ ಮನೆ ಕಟ್ಟುವಉದ್ದೇಶಕ್ಕೆ ಮೂಡುಬಿದಿರೆ ಪುರಸಭೆಯಿಂದ ೨೭ಅಕ್ಟೋಬರ್ ೨೦೨೦ರಂದು ಪರವಾನಿಗೆಯನ್ನು ಪಡೆದುಕೊಂಡು ಆ ಜಮೀನಿನಲ್ಲಿ ಫ್ರೀ ಸ್ಕೂಲ್ ಮತ್ತು ಆಲ್ ಮಫಾಝ್ ವುಮೆನ್ಸ್ ಶೆರಿಯತ್ ಕಾಲೇಜನ್ನು ನಡೆಸುತ್ತಿದ್ದು ಇವರ ವಿರುದ್ಧ ಪುರಸಭೆಯವರು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಹಾಗಾಗಿ ಎರಡನೇ ಬಾರೀ ಮನವಿಯನ್ನು ನೀಡುತ್ತಿದ್ದೇವೆ ಎಂದರು
ಹಿoಜಾವೇಯ ಜಿಲ್ಲಾ ಸಂಪರ್ಕ ಪ್ರಮುಖ್ ಸಂದೀಪ್ ಕೆಲ್ಲಪುತ್ತಿಗೆ, ತಾಲೂಕು ಸಂಪರ್ಕ ಪ್ರಮುಖ್ ಸಂತೋಷ್ ಕುಮಾರ್, ತಾಲೂಕು ಸಂಚಾಲಕ ಸಂದೀಪ್, ನಗರ ಸಂಚಾಲಕ ಶರತ್ ಕುಮಾರ್ ಮಿಜಾರು, ಪ್ರಮುಖರಾದ ಸುರೇಶ್ ಅಂಚನ್, ಜಿತೇಶ್, ಶುಭಕರ್ ಶೆಟ್ಟಿ, ಸನ್ಮತ್ ಕುಮಾರ್ ಕೆಲ್ಲಪುತ್ತಿಗೆ, ಗೌತಮ್ ಈ ಸಂದರ್ಭದಲ್ಲಿದ್ದರು.