ಮಂಗಳೂರು ದೇರಳಕಟ್ಟೆಯ ಯೆನೆಪೊಯ ಡೆಂಟಲ್ ಕಾಲೇಜಿನ ಆರ್ಥೊಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಸಂದೀಪ್ ಶೆಟ್ಟಿ ಅವರು, ಕ್ಲಾಸ್ III ಮ್ಯಾಲೋಕ್ಲೂಷನ್ ಚಿಕಿತ್ಸೆಗಾಗಿ ಹೊಸತು SAVE ಸಾಧನವನ್ನು ಅಭಿವೃದ್ಧಿಪಡಿಸಿ ಹೊಸ ತಂತ್ರವನ್ನು ಪರಿಚಯಿಸಿದ್ದಾರೆ.
ಡಾ. ಸಂದೀಪ್ ಶೆಟ್ಟಿ ಅವರ ಪಿಎಚ್ಡಿ ಪ್ರಬಂಧ "SAVE: A Novel Appliance and Its Finite Evaluation for Correction of Deficient Maxilla" ನಲ್ಲಿ ಪ್ರಸ್ತಾಪಿಸಿದ ಅವರ ಸಂಶೋಧನೆ SAVE ಸಾಧನದ ಪರಿಣಾಮಕಾರಿ ಹಾಗೂ ಕ್ರಾಂತಿಕಾರಿ ಸ್ವರೂಪವನ್ನು ಸಾಬೀತುಪಡಿಸಿದೆ.
ತಳ ವಸಡು (ಮ್ಯಾಂಡಿಬಲ್) ಮೇಲಿನ ವಸಡು (ಮ್ಯಾಕ್ಸಿಲ್ಲಾ) ಗಿಂತ ಮುಂದೆ, ಇದರಿಂದ ಹಲ್ಲಿನ ಜೋಡಣೆ , ಚಿಬ್ಬಲುತನ, ಚಪ್ಪರಿಸುವ, ಮಾತನಾಡುವ ತೊಂದರೆ ಮತ್ತು ಹಲ್ಲು ನೋವು ಉಂಟಾಗಬಹುದು.ಇದು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳ ಪರ್ಯಾಯವಾಗಿ ವೇಗದ, ಆರಾಮದಾಯಕ ಪರಿಹಾರ ಒದಗಿಸಬಲ್ಲ ಸಾಧನವೆಂದು ಗುರುತಿಸಲಾಗಿದೆ. ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್, ಕರ್ನಾಟಕ ಸರ್ಕಾರ ಆಯೋಜಿಸಿದ ಸ್ಪರ್ಧೆಯಲ್ಲಿ ಎರಡನೇ ಅತ್ಯುತ್ತಮ ಸ್ಟಾರ್ಟಪ್ ಎಂದು ಮಾನ್ಯತೆ ಪಡೆದಿದ್ದು, Big BIRAC ನಿಂದ ₹49 ಲಕ್ಷ ಅನುದಾನ ಹಾಗೂ ಕರ್ನಾಟಕ ಸರ್ಕಾರದಿಂದ ₹20 ಲಕ್ಷದ ನಿಧಿಯನ್ನು ಪಡೆದಿದೆ.
ಸಾಂಪ್ರದಾಯಿಕವಾಗಿ, ಕ್ಲಾಸ್ III ಮ್ಯಾಲೋಕ್ಲೂಷನ್ ಚಿಕಿತ್ಸೆಗೆ ದೊಡ್ಡದಾದ, ಸೌಕರ್ಯಕರ ಸಾಧನಗಳನ್ನು ಬಳಸಲಾಗುತ್ತಿತ್ತು, ಆದರೆ ಅವು ಧರಿಸಲು ಕಷ್ಟವಾಗುತ್ತಿತ್ತು, ಇದರಿಂದ ಚಿಕಿತ್ಸೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು. ಇದು ಚಿಕಿತ್ಸೆಯ ಸಮಯವನ್ನು ಕಡಿಮೆ ಮಾಡುವುದು, ರೋಗಿಗಳ ಸೌಕರ್ಯವನ್ನು ಹೆಚ್ಚಿಸುವುದು ಮತ್ತು ಅನುಸರಣೆಯನ್ನು ಸುಲಭಗೊಳಿಸುವುದರಲ್ಲಿ ಪರಿಣಾಮಕಾರಿ ಎನಿಸಿದೆ.
ಇನ್ನು ಮುಂದೆ ನಡೆಯಲಿರುವ ವೈದ್ಯಕೀಯ ಪ್ರಯೋಗಗಳೊಂದಿಗೆ, SAVE ಸಾಧನವು ಆರ್ಥೊಡಾಂಟಿಕ್ ಚಿಕಿತ್ಸೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಿದ್ಧವಾಗಿದೆ, ಕ್ಲಾಸ್ III ಮ್ಯಾಲೋಕ್ಲೂಷನ್ ರೋಗಿಗಳಿಗೆ ವೇಗದ, ಆರಾಮದಾಯಕ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಭರವಸೆಯನ್ನು ನೀಡುತ್ತಿದೆ.