ಉಡುಪಿಯ ಮಣಿಪಾಲದಲ್ಲಿ ಈಜಿ ಬೈ ಸ್ಟೋರ್ಸ್ ಶುಭಾರಂಭ

ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ಆರಂಭಿಸಿದ ಈಜಿ ಬೈ ಸ್ಟೋರ್ಸ್ ದೇಶದ ಮೆಟ್ರೋ ಮತ್ತು ನಾನ್-ಮೆಟ್ರೊ ಮಾರುಕಟ್ಟೆಗಳು ಸೇರಿದಂತೆ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಉತ್ತರಖಂಡ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಈಜಿ ಬೈ, ಕರ್ನಾಟಕದಾದ್ಯಂತ ಒಟ್ಟು 25 ಸ್ಟೋರ್ಸ್‍ಗಳನ್ನ ಹೊಂದಿದೆ. ಇದೀಗ ನೂತನವಾಗಿ ಉಡುಪಿ ಜಿಲ್ಲೆಯ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಶುಭಾರಂಭಗೊಂಡಿದೆ.

Easy Buy Stores Udupi

ಇದು ಕರ್ನಾಟಕದಲ್ಲಿನ ಈಜಿ ಬೈ ನ 25ನೇ ಸ್ಟೋರ್ ಮತ್ತು ದೇಶದಲ್ಲಿ 125 ನೇ ಸ್ಟೋರ್ ಆಗಿದೆ. ಈ ವಿಶಾಲವಾದ ಮಳಿಗೆಯು 8000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಇಡೀ ಕುಟುಂಬ ಬಯಸುವ ಟ್ರೆಂಡಿ ಫ್ಯಾಶನ್ ಒದಗಿಸುತ್ತದೆ. ಇಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಅತ್ಯದ್ಭುತ ಶಾಪಿಂಗ್ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಪಾದರಕ್ಷೆಗಳು ಮತ್ತು ಇತರೆ ಅಗತ್ಯ ಪರಿಕರಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ

Easy Buy Stores Udupi

ಈ ನೂತನ ಮಳಿಗೆಯ ಕುರಿತು ಮಾತನಾಡಿದ ಈಜಿ ಬೈ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಆನಂದ್ ಅಯ್ಯರ್ ಅವರು, “ದೇಶದಲ್ಲಿ 125ನೇ ಮಳಿಗೆ ಮತ್ತು ಕರ್ನಾಟಕದಲ್ಲಿ 25ನೇ ಮಳಿಗೆಯನ್ನು ಮಣಿಪಾಲದಲ್ಲಿ ಪ್ರಾರಂಬಿಸಿರುವುದು ನಮಗೆ ಸಂತೋಷ ತಂದಿದೆ. ಈಜಿ ಬೈ ಎಕ್ಸ್‍ಕ್ಲುಸಿವ್ ಸ್ಟೋರ್ ಟ್ರೆಂಡಿ ಫ್ಯಾಶನ್ ಅನ್ನು ಉತ್ತಮ ಬೆಲೆಯಲ್ಲಿ ಬಯಸುವ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಿದ್ದವಾಗಿದೆ. ಆದರೆ ವಿಶೇಷವಾಗಿ ವ್ಯಾಲ್ಯು ಫ್ಯಾಶನ್‍ನಲ್ಲಿ ಔಟ್‍ಲೆಟ್‍ಗಳ ನಿರ್ಬಂಧಿತ ಆಯ್ಕೆಯನ್ನು ಹೊಂದಿದೆ. ಈಜಿ ಬೈ ಸಂಪೂರ್ಣ ಕುಟುಂಬದ ಅಗತ್ಯವನ್ನು ಪೂರೈಸಲು, ಕೇವಲ ರೂ. 69 ರಿಂದ ಪ್ರಾರಂಭವಾಗುವ ಹಲವು ಸ್ಟೈಲ್‍ಗಳನ್ನು ನೀಡಲು ಮುಂದಾಗಿದೆ. ಟ್ರೆಂಡಿ ಮತ್ತು ಸೊಗಸಾದ ವಿವಿಧ ಶ್ರೇಣಿಯ ಮತ್ತು ಶೈಲಿಯ ಉಡುಪುಗಳು ಉತ್ತಮ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಪ್ರದೇಶದಲ್ಲಿ ಈಜಿ ಬೈ ವಿಸ್ತರಿಸಿರುವುದು ಸಂತೋಷದ ವಿಚಾರ. ಇನ್ನೂ ಹೆಚ್ಚಿನ ಸ್ಟೋರ್‍ಗಳನ್ನು ತೆರೆಯುವ ಬಗ್ಗೆ ಯೋಚನೆಯನ್ನು ಮಾಡುತ್ತೇವೆ” ಎಂದು ಹೇಳಿದರು.

Easy Buy Stores Udupi

ಈ ಉದ್ಘಾಟನಾ ಸಮಾರಂಭದ ಪ್ರಯುಕ್ತ, ಇಂದು ಈಜಿ ಬೈ ನಲ್ಲಿ ಗ್ರಾಹಕರಿಗಾಗಿ ಉದ್ಘಾಟನಾ ಕೊಡುಗೆಯು ಇತ್ತು. ರೂ. 2,499 ಶಾಪಿಂಗ್ ಮಾಡಿದ್ದಲ್ಲಿ, ರೂ. 1999 ಮೌಲ್ಯದ ಪ್ರೀಮಿಯಂ ಡಫಲ್ ಬ್ಯಾಗ್‍ನ್ನು ಕೇವಲ ರೂ. 249 ಕ್ಕೆ ಪಡೆಯಬಹುದಾಗಿದೆ. ರೂ. 4999 ಶಾಪಿಂಗ್ ಮಾಡಿದ್ದಲ್ಲಿ ರೂ. 3775 ಬೆಲೆಯ ಪ್ರೆಸ್ಟೀಜ್ ಮಿಕ್ಸರ್ ಗ್ರೈಂಡರ್‍ನ್ನು ರೂ. 599ಕ್ಕೆ ಪಡೆಯುವ ಅವಕಾವಿದೆ. ಇಷ್ಟು ಮಾತ್ರವಲ್ಲದೆ ಗ್ರಾಹಕರು ಕಾರ್ಡ್-ಲೆಸ್ ಲಾಯಲ್ಟಿ ಪ್ರೋಗ್ರಾಮ್‍ನ್ನು ಪಡೆಯಬಹುದು ಮತ್ತು ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಮೂಲಕ ಪ್ರತಿ ಬಾರಿ ಶಾಪಿಂಗ್ ಮಾಡುವಾಗ ರಿವಾರ್ಡ್ ಪಾಯಿಂಟ್‍ಗಳನ್ನು ಗಳಿಸಬಹುದು.

Easy Buy Stores Udupi

Related Posts

Leave a Reply

Your email address will not be published.