ಇನ್ನಾದಲ್ಲಿ ವಿದ್ಯುತ್ ಟವರ್ ವಿರುದ್ಧ ಬೃಹತ್ ಪ್ರತಿಭಟನೆ

ನಂದಿಕೂರಿನಿಂದ ಇನ್ನ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶದ ಕೃಷಿ ಭೂಮಿಯ ಮೇಲಿಂದ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ 400 ಕೆ ವಿ ಸಾಮರ್ಥ್ಯದ ವಿದ್ಯುತ್ ಸ್ಪೀಡರ್ ಟವರ್ ಅಳವಡಿಕೆಯ ಯೋಜನೆಯ ಬಗ್ಗೆ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಇನ್ನ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ,ಹಲವು ತಿಂಗಳುಗಳಿಂದ ಉಡುಪಿ ಕಾಸರಗೋಡು 400 ಕೆ ವಿ ವಿದ್ಯುತ್ ಲೈನ್ ಯೋಜನೆಯ ವಿರುದ್ಧ ಇನ್ನಾದಿಂದ ಪ್ರಾರಂಭಿಸಿ ಉಭಯ ಜಿಲ್ಲೆಗಳಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಅಭಿವೃದ್ಧಿ ಯೋಜನೆಗಳು ನಡೆಯಬೇಕು. ಆದರೆ ಜನಾಭಿಪ್ರಾಯವನ್ನು ವಿರೋಧಿಸಿ ಯಾವುದೇ ಅಭಿವೃದ್ಧಿ ಯೋಜನೆಗಳು ನಡೆಯಬಾರದು. ಯಾವುದೇ ಯೋಜನೆಗಳು ನಡೆಯಬೇಕಾದರೆ ಜನರಿಗೆ ತೊಂದರೆ ಆಗದ ರೀತಿಯಲ್ಲಿ ನಡೆಯಬೇಕು ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಯಾವುದೇ ಯೋಜನೆಗಳನ್ನು ಜಾರಿಗೊಳಿಸಬೇಕಾದರೆ ಆ ಭಾಗದ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆದು ಕಾರ್ಯರೂಪಕ್ಕೆ ತರಬೇಕು. ಕೃಷಿಯನ್ನೆ ನಂಬಿಕೊಂಡಿರುವ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿ ಉಳಿಸಬೇಕಾದರೆ ಹೋರಾಟ ಅನಿವಾರ್ಯ. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಜಯ ಖಂಡಿತ. ಯೋಜನೆಯಿಂದ ಬಾದಿತ ರಾಗಿರುವ ಜಮೀನು ಮಾಲೀಕರಿಗೆ ಕಂಪನಿ ಯಾವುದೇ ಪೂರ್ವ ಮಾಹಿತಿ ನೋಟಿಸು ನೀಡದೆ ಜಿಲ್ಲಾಧಿಕಾರಿಯ ಆದೇಶವಿದೆ ಎಂದು ಏಕಾಏಕಿ ಕಾಮಗಾರಿ ನಡೆಸಿರುವುದು ಖಂಡನೀಯ ಎಂದು ಹೇಳಿದರು.

protest

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಜನಪ್ರತಿನಿಧಿಗಳಿಗೆ ಜನರೇ ಪ್ರಾಮುಖ್ಯ ಜನರಿಗೆ ಬೇಕಾದ ಕೆಲಸ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ ಗ್ರಾಮಸ್ಥರಿಗೆ ಬೇಡವಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ರೈತರು ದೇಶದ ಬೆನ್ನೆಲುಬು ಆದರೆ ರೈತರ ಬೆನ್ನನ್ನು ಮುರಿಯುವ ಕೆಲಸ ಆಗ್ತಾ ಇದೆ ಎಂದು ಹೇಳಿದರು .

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಆಗಮಿಸಿ ಇನ್ನ ಟವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಆದೇಶ ನೀಡಿ ಬಳಿಕ ಮಾತನಾಡಿದ ಅವರು, ಈ ದೇಶದ ಜನರು ರೈತರನ್ನು ನಂಬಿ ಬದುಕುವರು ಹೀಗಾಗಿ ಅವರನ್ನು ಬದುಕಲು ಬಿಡಿ .ಜನವಿರೋಧಿ ಯೋಜನೆಗಳಿಗೆ ಯಾವತ್ತು ಬೆಂಬಲ ಇಲ್ಲ ಎಂದು ಉಸ್ತುವಾರಿ ಸಚಿವರು ಅತಿ ಶೀಘ್ರ ದಲ್ಲಿ ರಾಜ್ಯದ ಇಂಧನ ಸಚಿವ ಕೆ ಜೆ ಜಾರ್ಜ್ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ಪರಿಶೀಲಿಸಿ ಕೃಷಿಕರಿಗೆ ತೊಂದರೆ ಯಾಗುದಿದ್ದರೆ ಖಂಡಿತ ಕೃಷಿಕರ ಪರವಾಗಿ ನಿಲ್ಲುವುದಾಗಿ ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಹಾಗೂ ಕಾರ್ಕಳ ತಾಸಿಲ್ದಾರ್ ನರಸಪ್ಪ ನವರಿಗೂ ಮನವಿ ನೀಡಲಾಯಿತು. ಉಡುಪಿ ಜಿಲ್ಲಾ ಎಸ್ ಪಿ ಅರುಣ್ ಡಿ ವೈ ಎಸ್ ಪಿ ಅರವಿಂದ ಕುಲಗಚ್ಚಿ, ಕಾಪು ವ್ರತ್ತ ನಿರೀಕ್ಷಕ್ಕೆ ಜಯಶ್ರೀ ಮಾನೆ, ಪಡುಬಿದ್ರಿ ಎಸ್ ಐ ಪ್ರಸನ್ನ ಸಹಿತ ನೂರಾರು ಪೊಲೀಸರಿದ್ದರು.

protest

ಪ್ರತಿಭಟನೆ ಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ದಕ್ಷಿಣ ಕನ್ನಡ ರೈತ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ಬೆಳ್ಮಣ್ ಟೋಲ್ ಗೇಟ್ ಹೊರಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ, ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ, ನವೀನ್ ಚಂದ್ರ ಶೆಟ್ಟಿ ,ಕರ್ನಾಟಕ ರಾಜ್ಯಹಸಿರು ಸೇನೆ ಸಂಚಾಲಕ ಮನೋಹರ್ ಶೆಟ್ಟಿ, ಇನ್ನ ಗ್ರಾಮ ಪಂಚಾಯತ್ ಅಧ್ಯಕ್ಷ ಸರಿತಾ ಶೆಟ್ಟಿ, ಫಲಿಮಾರು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕೋಟ್ಯಾನ್ , ಹೋರಾಟಗಾರ ಪ್ರೇಮಾನಂದ ಕಲ್ಮಾಡಿ , ನಂದಿ ಕೂರು ಜನಜಾಗೃತಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಮೈದಿನಬ್ಬ ಇನ್ನಾ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ರೈತ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪ್ರಭಾಕರ ಇನ್ನಾ ಕಾರ್ಯಕ್ರಮ ನಿರೂಪಿಸಿದರು.ಇನ್ನಾ ಪೇಟೆಯ ಎಲ್ಲ ಅಂಗಡಿ ಮಾಲಕರು ಬಂದು ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

add - wolkwagon

Related Posts

Leave a Reply

Your email address will not be published.