ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಚಿತ್ರ ನಟ ದೊಡ್ಡಣ್ಣ ಕುಟುಂಬ ಭೇಟಿ

ಕಾಪು ಸಾವಿರ ಸೀಮೆಯ ಒಡೆಯ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು.
ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ಧನ್ ಭಟ್ ದೇವಸ್ಥಾನದ ವತಿಯಿಂದ ಗೌರವಿಸಿದರು. ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು.

ಈ ಸಂದರ್ಭ ಜೋತಿಷ್ಯ ವಿದ್ವಾನ್ ಪ್ರಕಾಶ್ ಅಮ್ಮಣ್ಣಯ, ಗಿರೀಶ್ ಪಾತ್ರಿ, ಸಂದೀಪ್ ಶೆಟ್ಟಿ, ಲಕ್ಷ್ಮಿಕಾಂತ್ ಮತ್ತಿತರರು ಉಪ್ಥಿತರಿದ್ದರು.
