ಮೀನುಗಾರಿಕೆಯ ಖುತುಮಾನ ಅಂತ್ಯ : ಸಮುದ್ರ ದಡದಲ್ಲಿ ಲಂಗರು ಹಾಕಿದ ಬೋಟುಗಳು
ಕರಾವಳಿ ಅಂದಾಕ್ಷಣ ನೆನಪಾಗೋದೇ ಕಡಲು. ಇಲ್ಲಿನ ಕಡಲಿನ ಮೀನುಗಾರಿಕೆಯಲ್ಲಿ ಕೋಟಿಗಟ್ಟಲೆ ಮೌಲ್ಯದ ಮೀನುಗಾರಿಕೆ ಪ್ರತೀ ವರ್ಷ ನಡೆಯುತ್ತಿದೆ. ಅದೆμÉ್ಟೂೀ ಮಂದಿ ಮೀನುಗಾರರು ಇದನ್ನೆ ನಂಬಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಮೀನುಗಾರಿಕೆಯೇ ಕರಾವಳಿಯ ಮುಖ್ಯ ಉದ್ಯಮ. ಇದೀಗ ಜೂನ್ 1ರಿಂದ ಜುಲೈ 31ರವರೆಗೆ ಅಂದ್ರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಮೀನುಗಾರಿಕೆಯ ಖುತುಮಾನ ಅಂತ್ಯಗೊಳ್ಳಲಿದ್ದು, ಮೀನುಗಾರಿಕಾ ಬೋಟುಗಳು ಲಂಗರು ಹಾಕತೊಡಗಿವೆ.