Home Posts tagged #fishing

ಉಳ್ಳಾಲ: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ

ಉಳ್ಳಾಲ: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ ಸುಮಾರು 75 ಕೆಜಿ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ ಈ ಮೀನು ಬಿದ್ದಿದೆ. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ

ಶಿರೂರು: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಮೃತ್ಯು

ಶಿರೂರಿನ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿ ಮೃತಪಟ್ಟ ಘಟನೆ ಅಳ್ವೆಗದ್ದೆಯಲ್ಲಿ ನಡೆದಿದೆ. ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ. ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಪ್ರಕ್ಷುಬ್ದ ಇರುವ ಕಾರಣ

ಗಂಗೊಳ್ಳಿ : ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ಜೆಟ್ಟಿ ನಿರ್ಮಾಣ ಕಾರ್ಯ

ಕರಾವಳಿಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಸಂಪೂರ್ಣ ನಿರ್ಲಕ್ಷ್ಯಕ್ಕೊಗಾದ ಸ್ಥಿತಿಗೆ ತಲುಪಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿನ ಜೆಟ್ಟಿಯ ಒಂದು ಭಾಗ ಕುಸಿದು ಮೀನುಗಾರಿಕೆಗೆ ತೊಂದರೆಯಾಗಿದ್ದರೂ ಜೆಟ್ಟಿಯ ಮರು ನಿರ್ಮಾಣದ ಕಾರ್ಯ ಕನಸಾಗಿಯೇ ಉಳಿದಿದೆ. ಗಂಗೊಳ್ಳಿಯಲ್ಲಿ 2013ರಲ್ಲಿ 10 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲಾಗಿತ್ತು. ಇದು 2016ರಲ್ಲಿ ಹಾನಿಗೊಳಗಾಯಿತು. 2018 ರಲ್ಲಿ ದುರಸ್ತಿಗಾಗಿ ಹೆಚ್ಚುವರಿ 3

ಮೀನುಗಾರಿಕೆಯ ಖುತುಮಾನ ಅಂತ್ಯ : ಸಮುದ್ರ ದಡದಲ್ಲಿ ಲಂಗರು ಹಾಕಿದ ಬೋಟುಗಳು

ಕರಾವಳಿ ಅಂದಾಕ್ಷಣ ನೆನಪಾಗೋದೇ ಕಡಲು. ಇಲ್ಲಿನ ಕಡಲಿನ ಮೀನುಗಾರಿಕೆಯಲ್ಲಿ ಕೋಟಿಗಟ್ಟಲೆ ಮೌಲ್ಯದ ಮೀನುಗಾರಿಕೆ ಪ್ರತೀ ವರ್ಷ ನಡೆಯುತ್ತಿದೆ. ಅದೆμÉ್ಟೂೀ ಮಂದಿ ಮೀನುಗಾರರು ಇದನ್ನೆ ನಂಬಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಮೀನುಗಾರಿಕೆಯೇ ಕರಾವಳಿಯ ಮುಖ್ಯ ಉದ್ಯಮ. ಇದೀಗ ಜೂನ್ 1ರಿಂದ ಜುಲೈ 31ರವರೆಗೆ ಅಂದ್ರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಮೀನುಗಾರಿಕೆಯ ಖುತುಮಾನ ಅಂತ್ಯಗೊಳ್ಳಲಿದ್ದು, ಮೀನುಗಾರಿಕಾ ಬೋಟುಗಳು