ಮಂಗಳೂರು : ಡಿ.14ರಂದು ಉಚಿತ ವೃತ್ತಿ ಜಾಗೃತಿ ಕಾರ್ಯಾಗಾರ

ಭಾರತದ ಟ್ರೆಂಡಿಂಗ್ ಕೆರಿಯರ್ ಗೈಡೆನ್ಸ್ ಪ್ಲಾಟ್ಫಾರ್ಮ್ ಮತ್ತು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಸಹಯೋಗದೊಂದಿಗೆ “ಡ್ರಾ ಮೈ ಕೆರಿಯರ್” ವೃತ್ತಿ ಜಾಗೃತಿ ಕಾರ್ಯಾಗಾರವು ಡಿ.14 ರಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಸುತ್ತಿದೆ.ಕಾರ್ಯಾಗಾರವು 9,10, ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿರುಚಿಯನ್ನು ಅರ್ಥಮಾಡಿಕೊಳ್ಳಲು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.ಐಐಎಂ – ಕೋಝಿಕ್ಕೋಡ್ನ ಹಳೆಯ ವಿದ್ಯಾರ್ಥಿಗಳಾದ ನವೀನ್ ಪಾಲ್ ಮತ್ತು ಉನ್ನತ ಶಿಕ್ಷಣ ತಜ್ಞ ಸ್ಟೆನ್ಸನ್ ಜಾನಿ ಅವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.ಡಿಸೆಂಬರ್ 14ರಂದು ಸಂಜೆ 4 ಗಂಟೆಗೆ ಮಂಗಳೂರಿನ ಐಎಂಎ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಾಗ್ರಾರಕ್ಕೆ ಪ್ರವೇಶ ಉಚಿತವಾಗಿದ್ದು, ಭಾಗವಹಿಸುವವರಿಗೆ ನೋಂದಣಿ ಕಡ್ಡಾಯವಾಗಿದೆ.ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 89046 01555

www. drawmycareer.com

Related Posts

Leave a Reply

Your email address will not be published.