‘ಗೋಸ್ಮರಿ ಫ್ಯಾಮಿಲಿ’ ತುಳು ಸಿನಿಮಾ ಮೇ 18ರಂದು ಕರಾವಳಿಯಾದ್ಯಂತ ಬಿಡುಗಡೆ

ಯೋಧ ಮೋಷನ್ ಬ್ಯಾನರ್ ಅಡಿಯಲ್ಲಿ ಸಾಯಿ ಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಲನಚಿತ್ರ ‘ಗೋಸ್ಮರಿ ಫ್ಯಾಮಿಲಿ’ ತುಳು ಸಿನಿಮಾ ಮೇ 18ರಂದು ಕರಾವಳಿಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ತುಳುವಿನ ಬಹುನಿರೀಕ್ಷಿತ ಸಿನಿಮಾ ಗೋಸ್ಮರಿ ಫ್ಯಾಮಿಲಿ ಮೇ 18ರಂದು ತೆರೆ ಮೇಲೆ ಬರಲಿದೆ. ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಸಿನಿ ಪ್ರೇಕ್ಷಕರು ಗೋಸ್ಮರಿ ಫ್ಯಾಮಿಲಿಯ ಸಿನಿಮಾವನು ಮೇ 18ರಿಂದ ವೀಕ್ಷಿಸಲಿದ್ದಾರೆ. ಶಕುಂತಲಾ ಆಂಚನ್ ನಿರ್ಮಾಣದ ಈ ಸಿನಿಮಾಕ್ಕೆ ಛಾಯಾಗ್ರಹಣವನ್ನು ಪಿಎಲ್ ರವಿ ನಿರ್ವಹಿಸಿದ್ದಾರೆ. ಆಕಾಶ್ ಪ್ರಜಾಪತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಜಿತ್ ನಾಯಕ್ ಮತ್ತು ಸುಮಿತ್ ಪರ್ನಾಮಿ ಚಿತ್ರದ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
‘ಗೋಸ್ಮರಿ ಫ್ಯಾಮಿಲಿ’ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಮತ್ತು ಸಮತಾ ಅಮೀನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಖ್ಯಾತ ತುಳು ಹಾಸ್ಯ ತಾರೆಗಳಾದ ಡಾ. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮತ್ತು ಉಮೇಶ್ ಮಿಜಾರ್, ಚಿತ್ರದಲ್ಲಿ ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮೊದಲಾದವರು ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಎಂದು ಬಣ್ಣಿಸಲಾಗಿರುವ ‘ಗೋಸ್ಮಾರಿ ಫ್ಯಾಮಿಲಿ’ ಮೇ 18 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.