ಜಿ.ರಾಜಶೇಖರ ನಿಧನಕ್ಕೆ ಎಡ ಸಂಘಟನೆಗಳಿಂದ ತೀವ್ರ ಸಂತಾಪ

ಖ್ಯಾತ ವಿಮರ್ಶಕ, ಚಿಂತಕ, ಬರಹಗಾರ ಜಿ ರಾಜಶೇಖರ ನಿಧನಕ್ಕೆ ಮಂಗಳೂರಿನ ಎಡ ಹಾಗು ಜನಪರ ಪಕ್ಷ, ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಕೋಮುವಾದ, ಫ್ಯಾಸಿಸಂ ವಿರುದ್ದದ ದೃಢ ಧ್ವನಿಯಾಗಿದ್ದ ರಾಜಶೇಖರರವರು ಒಂದೆರಡು ತಲೆಮಾರನ್ನು ಪ್ರಭಾವಿಸಿದ ಮಹಾನ್ ಚಿಂತಕ ಎಂದು ಸಂತಾಪ ಸಂದೇಶದಲ್ಲಿ ಬಣ್ಣಿಸಿದೆ.ಜಿ ರಾಜಶೇಖರರವರು ದಣಿವಿಲ್ಲದೆ ದುಡಿದ ಕೋಮುವಾದ ವಿರೋಧಿ ದಾರಿಯಲ್ಲಿ ರಾಜಿಯಿಲ್ಲದೆ ಸಾಗುವುದು ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದು ಸಿಪಿಐಎಂ ದ ಕ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ ಕುಕ್ಯಾನ್, ಹಿರಿಯ ವಿಚಾರವಾದಿ ನರೇಂದ್ರ ನಾಯಕ್,ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ,ಸಮುದಾಯದ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ಸಿಐಟಿಯು ಜಿಲ್ಲಾ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್,ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ದಲಿತ ಮುಖಂಡ ಎಂ ದೇವದಾಸ್, ಪ್ರಗತಿಪರ ಚಿಂತಕರ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ,DYFI ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್,ನವೀನ್ ಕೊಂಚಾಡಿ,SFI ನಾಯಕರಾದ ವಿನೀತ್ ಎಂ.ದೇವಾಡಿಗ, ರೇವಂತ್ ಕದ್ರಿಯವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ
