ಹಳೆಯಂಗಡಿ : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ

ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು ಪ್ರಾಯೋಜಕತ್ವದಲ್ಲಿ, ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಗ್ರಾಮ ಪಂಚಾಯತ್ ಪಡುಪಣಂಬೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್, ಸಾರ್ವಜನಿಕ ದಂತ ಆರೋಗ್ಯ ವಿಭಾಗ ಎ. ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಹಾವಿದ್ಯಾಲಯ ಮಂಗಳೂರು, ಡಾ. ಎಂ ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ತೋಕೂರು ತಪೋವನ, ಇಂಟರಾಕ್ಟ್ ಕ್ಲಬ್, ಸ್ಕೌಟ್ಸ್ ಗೈಡ್ಸ್, ರೆಡ್ ಕ್ರಾಸ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ ಹಮ್ಮಿಕೊಂಡರು.

ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮಾ ಚಂದ್ರಶೇಖರ್ ರವರು ಮಾತನಾಡಿ, ದುಶ್ಚಟಗಳಿಂದ ಯುವ ಪೀಳಿಗೆ ದೂರವಿರಬೇಕು, ಈ ಬಗ್ಗೆ ಮಕ್ಕಳು ತಮ್ಮ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು,

ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ ರೋಟೇರಿಯನ್ ಸುಧಾಕರ ಸಾಲ್ಯಾನ್, ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದಂತ ವೈದ್ಯಾಧಿಕಾರಿಯಾದ ಸಹನಾ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ವೈದ್ಯಾಧಿಕಾರಿಯಾದ ಡಾಕ್ಟರ್ ಅನ್ಸಿಲ್ಲಾ ಪತ್ರಾವೊ, ಡಾಕ್ಟರ್ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತಪೋವನ, ತೋಕೂರು ಇಲ್ಲಿನ ಸಹ ಶಿಕ್ಷಕಿಯಾದ ಜ್ಯೋತಿ ಬಂಜನ್, ಯುವಜನ ಮತ್ತು ಕ್ರೀಡಾ ಇಲಾಖೆ ಯುವ ಪರಿವರ್ತಕರಾದ ಶ್ರೀ ಪ್ರೀತೇಶ್, ಆಲ್ ಇಂಡಿಯಾ ಡಿಮ್ಯಾಟ್ ಅಕೌಂಟ್ ಇಂಪಿರಿಯಲ್ ಕಾರ್ಪೊರೇಷನ್ ಹೆಡ್ ಆಗಿರುವ ಸುಭಾಷ್ ಶೆಟ್ಟಿ, ಇದರ ಯುವ ಫೇಮಸ್ ಯೂತ್ ಕ್ಲಬ್ ನ ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.