ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ : ತಾತ್ಕಲಿಕ ನೆರೆಯಿಂದ ಜನರ ಪರದಾಟ

ಕರಾವಳಿಯಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು ನದಿ, ತೊರೆಗಳು ತುಂಬಿ ಹರಿಯತೊಡಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ‌ ಸ್ಥಿತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆ, ಕಾಲೇಜಿಗೆ ರಜೆ ಸಾರಲಾಗಿದೆ.

ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರವಾಹ ಸ್ಥಿತಿ ಎದುರಾಗಿದೆ. ಕುಮಾರಧಾರ, ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು ನದೀ ದಡದ ಪ್ರದೇಶಗಳ ಮನೆಗಳಿಗೆ ನೆರೆ ನೀರು ನುಗ್ಗಿದೆ.

ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸ್ನಾನಘಟ್ಟ ಮುಳುಗಡೆಯಾಗಿದ್ದು ಅಪಾಯದ ಮಟ್ಟ ತಲುಪಿದೆ. ಮಂಗಳೂರು ನಗರದ ಕುಲಶೇಖರದ ಬಜ್ಜೋಡಿಯಲ್ಲಿ ಕ್ಲಾಡಿ ಲೋಬೊ ಎಂಬವರಿಗೆ ಸೇರಿದ ವರ್ಕ್ ಶಾಪ್ ಗೆ ಮಳೆ ನೀರು ನುಗ್ಗಿದ್ದು ಪ್ರವಾಹದ ರೀತಿ ಹರಿಯತೊಡಗಿದೆ. ಬೆಳ್ಳಂಬೆಳಗ್ಗೆ ಚರಂಡಿ ನೀರು ನುಗ್ಗಿದ್ದರಿಂದ ಸಿಬಂದಿ ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.

ಮುಂಜಾಗ್ರತ ಕ್ರಮವಾಗಿ ಇಂದು ಜಿಲ್ಲಾಧಿಕಾರಿಯವರಿಂದ ಶಾಲಾ ಕಾಲೇಜುಗಳೀಗೆ ರಜೆ ಘೋಷಿಸಲಾಗಿದೆ

Related Posts

Leave a Reply

Your email address will not be published.