ಉದ್ಯಮಿ ಜಯರಾಂ ಬನನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯರಾಂ ಬನನ್ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾಗಿದ್ದಾರೆ. ದೆಹಲಿ ಸೇರಿದಂತೆ ದೇಶದ ಉದ್ದಕ್ಕೂ ಹೋಟೆಲ್ ಉದ್ಯಮ ನಡೆಸುತ್ತಿರುವ ಕಾರ್ಕಳದ ಮಠದಬೆಟ್ಟುವಿನ ಹೊಟೇಲ್ ಉದ್ಯಮಿ ಸಮಾಜ ಸೇವಕ ಜಯರಾಂ ಬನನ್ ಅವರಿಗೆ ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. 13ನೇ ವಯಸ್ಸಿನಲ್ಲಿ ಮನೆಬಿಟ್ಟು ಮುಂಬಯಿಗೆ ತೆರಳಿ ಕಷ್ಟ ಕಾರ್ಪಣ್ಯಗಳ ನಡುವೆ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರಿದ್ದರು.

5 ಸಾವಿರ ರೂಪಾಯಿಗಳ ಬಂಡವಾಳದೊಂದಿಗೆ ದಿಲ್ಲಿಯ ಡಿಫೆನ್ಸ್ ಕಾಲನಿಯಲ್ಲಿ ಸಾಗರ್ ರತ್ನ ರೆಸ್ಟೋರೆಂಟ್ ಆರಂಭಿಸಿದ್ದರು. ಆನಂತರ ದಿಲ್ಲಿಯಾದ್ಯಂತ ಸರಣಿ ರೆಸ್ಟೋರೆಂಟ್‍ಗಳನ್ನು ತೆರೆದರು. ಓಶಿಯನ್ ಪರ್ಲ್ ಹೋಟೆಲ್ ಕೂಡ ಇವರದ್ದಾಗಿದೆ. ದೇಶದಲ್ಲಿ ಸಾಗರ ರತ್ನ ಮತ್ತು ಶ್ರೀ ರತ್ನಂ ಹೆಸರಿನ ಸುಮಾರು 105ಕ್ಕೂ ಹೆಚ್ಚು ಶಾಖೆಗಳು ಮತ್ತು ಅದರ ಅಂಗಸಂಸ್ಥೆ ಸ್ವಾಗತ್ ಹೆಸರಿನಲ್ಲಿ ಇನ್ನಷ್ಟು ಶಾಖೆಗಳು ಸ್ಥಾಪಿತವಾಗಿವೆ. ಉಪಚಾರ, ಆಹಾರ, ನೈರ್ಮಲ್ಯ ಮುಂತಾದ ಉತ್ಕøಷ್ಠತೆಗಳನ್ನು ಹೊಂದಿದ್ದು ಹೆಸರುವಾಸಿಯಾಗಿದೆ.

ಉದ್ಯಮ ಕ್ಷೇತ್ರದಲ್ಲಿ ಜಯರಾಂ ಬನನ್ ಸಾಧಿಸಿದ ಪ್ರಗತಿಯನ್ನು ದೇಶದ ಅನೇಕ ಮಾಧ್ಯಗಳು ಗುರುತಿಸಿದೆ. ಇಂಕ್ ಇಂಡಿಯಾ ಎಂಬ ಇಂಗ್ಲಿಷನ್ ನಿಯತಕಾಲಿಕೆ ಏಳು ಬನಾನ್ ಅವರನ್ನು ಸಾಂಬಾರಿನ ಸುಲ್ತಾನ್ ಎಂದು ಉಲ್ಲೇಖಿಸಿದೆ. ಸಂಘ, ಸಂಸ್ಥೆಗಳು, ದೇವಸ್ಥಾನ, ಬಡವರು, ದೀನವರ್ಗದವರಿಗೆ ವಿದ್ಯಾರ್ಥಿಗಳಿಗೆ ಜಯರಾಂ ಬನನ್ ಅವರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

Related Posts

Leave a Reply

Your email address will not be published.