ಮಂಗಳೂರಿನಲ್ಲಿ ಹೊಚ್ಚ ಹೊಸ ಶೋರೂಂ ಆಗಿ ಕಂಗೊಳಿಸುತ್ತಿರುವ ಜೋಸ್ ಆಲುಕ್ಕಾಸ್

ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹೆಸರಾಂತ ಜ್ಯುವೆಲ್ಲರಿ ಗ್ರೂಪ್ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ನವೀಕೃತಗೊಂಡಿದ್ದು, ಹೊಚ್ಚ ಹೊಸ ಶೋರೂಂನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೋಸ್ ಆಲುಕ್ಕಾಸ್ ಬ್ರ್ಯಾಂಡ್ ಕಳೆದ 58 ವರ್ಷಗಳಿಂದ ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥಕವಾಗಿದೆ. ವಿಶಿಷ್ಠವಾದ ಕಾರ್ಯಾಚರಣೆ ವ್ಯವಸ್ಥೆ ಮತ್ತು ದೂರದೃಷ್ಟಿಯೊಂದಿಗೆ ಈ ಬ್ರ್ಯಾಂಡ್ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ಬಲವಾದ ಪರಂಪರೆಯನ್ನು ಸ್ಥಾಪಿಸಿದೆ. ಇದೀಗ ಮಂಗಳೂರು ನಗರದ ಕೆಎಸ್ ರಾವ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಜೋಸ್ ಆಲುಕ್ಕಾಸ್ ಮಳಿಗೆ ಹೊಚ್ಚ ಹೊಸ ಲುಕ್‍ನೊಂದಿಗೆ ಕಂಗೊಳಿಸುತ್ತಿದ್ದು ಅದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಂತರ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜೋಸ್ ಆಲುಕ್ಕಾಸ್ ಸಂಸ್ಥೆ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಮಂಗಳೂರಿನ ಜನತೆಗೆ ತೃಪ್ತಿಯ ಸೇವೆಯನ್ನು ನೀಡುತ್ತಿದೆ. ಈ ಸಂಸ್ಥೆ ಇನ್ನಷ್ಟಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು. ಆನಂತರ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ಅಂಶು ಕುಮಾರ್ ಐಪಿಎಸ್ ಅವರು ಮಾತನಾಡಿ, ನವೀಕೃತಗೊಂಡ ಜೋಸ್ ಆಲುಕ್ಕಾಸ್ ಸಂಸ್ಥೆಗೆ ಶುಭ ಹಾರೈಸಿದರು.

ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂತಾರ ಖ್ಯಾತಿಯ ನಟ ಪ್ರಕಾಶ್ ತೂಮಿನಾಡು ಮತ್ತು ನಟಿ ಸೋನಲ್ ಮೊಂತೆರೋ ಅವರು ಮಾತನಾಡಿ, ಜೋಸ್ ಅಲುಕ್ಕಾಸ್ ಸಂಸ್ಥೆಗೆ ಶುಭಹಾರೈಸಿದರು. ಜೋಸ್ ಆಲುಕ್ಕಾಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಆಲುಕ್ಕಾ ಅವರು ಮಾತನಾಡಿ, ಜೋಸ್ ಆಲುಕ್ಕಾಸ್ ಸಂಸ್ಥೆ ನವೀಕೃತಗೊಂಡಿದ್ದು, ಇಲ್ಲಿ ಚಿನ್ನ, ಬೆಳ್ಳಿ, ಮತ್ತು ವಜ್ರ ಪ್ಲಾಟಿನಂತಹ ಅಭರಣಗಳಿದ್ದು, ಗ್ರಾಹಕರಿಗೆ ಮನಕೊಪ್ಪುವ ಕಲೆಕ್ಷನ್ಸ್‍ಗಳಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೋಸ್ ಆಲುಕ್ಕಾಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪಾಲ್ ಜಿ ಅಲುಕ್ಕಾ, ಜಾನ್ ಆಲುಕ್ಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜೋಸ್ ಆಲುಕ್ಕಾಸ್ ಉದ್ಘಾಟನೆಯ ಪ್ರಯುಕ್ತ ಅತ್ಯಾಕರ್ಷಕ ಆಫರ್‍ಗಳನ್ನು ಘೋಷಿಸಿದೆ. 40 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಚಿನ್ನದ ನಾಣ್ಯ ಉಚಿತವಾಗಿ ದೊರೆಯುತ್ತದೆ. ಜೊತೆಗೆ ವಜ್ರದ ಮೇಲೆ ಶೇ.20ರಷ್ಟು ರಿಯಾಯಿತಿ ಮತ್ತು ಪ್ಲಾಟಿನಂ ಆಭರಣಗಳ ಮೇಲೆ 7% ರಿಯಾಯಿತಿ ಇದೆ. ಗ್ರಾಹಕರು ತಮ್ಮ ಹಳೆಯ 22 ಕ್ಯಾರಟ್ ಚಿನ್ನವನ್ನು ಬಿಐಎಸ್ ಹಾಲ್ ಮಾರ್ಕ್ ಮಾಡಿದ 916 ಚಿನ್ನದ ಆಭರಣಗಳಿಗೆ ಅಥವಾ ಐಜಿಐ ಪ್ರಾಮಾಣೀಕೃತ ವಜ್ರದ ಆಭರಣಗಳಿಗೆ ಹೆಚ್ಚುವರಿ ಲಾಭಗಳೊಂದಿಗೆ ಎಕ್ಸ್‍ಚೇಂಜ್ ಮಾಡಿಕೊಳ್ಳಬಹುದು. ಗ್ರಾಹಕರು ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯಗಳನ್ನು ಮತ್ತು ಪ್ರತೀ ಖರೀದಿಗೆ ಉಚಿತ ಉಡುಗೊರೆಗಳನ್ನು ಪಡೆಯಬಹುದು. ಹೊಸ ಶೋರೂಂ ಹಬ್ಬದ ವಿಶೇಷ ವಜ್ರದ ಆಫರ್‍ಗಳನ್ನು ಸಹ ನೀಡುತ್ತಿದ್ದಾರೆ. ಗ್ರಾಹಕರು ಈ ಆಫರ್‍ನ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

Related Posts

Leave a Reply

Your email address will not be published.