ಕಡಬ: ಮದ್ಯ ಮುಕ್ತ ಮತದಾನದ ಸಂಕಲ್ಪ ಗ್ರಾಮಾಭಿವೃಧ್ಧಿ ಯೋಜನೆಯ ಧ್ಶೇಯ: ರವಿಪ್ರಸಾದ್ ಆಲಾಜೆ

 ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮದ್ಯ ಮುಕ್ತ ಮತದಾನ ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ದೊಡ್ಡಕೊಪ್ಪ ಒಕ್ಕೂಟದ ಸದಸ್ಶರಿಗೆ ತಿಳುವಳಿಕೆ ನೀಡಿ ಕರಪತ್ರ ಹಂಚಲಾಯಿತು.

ವಿಧಾನ ಸಭಾ ಚುನಾವಣಾ ವೇಳೆ ಮದ್ಯಪಾನದ ಆಮಿಷಕ್ಕೆ ಒಳಗಾಗಿ ಮತದಾನವನ್ನು ಮಾಡುವುದು ಹಾಗೂ ಮದ್ಯ ಪಾನದ ಆಸೆಯನ್ನು ತೋರಿಸಿ ಮತಕೇಳುವುದು ಇವೆರಡೂ ಸಮಾಜ ಘಾತುಕ ಚಟುವಟಿಕೆಗಳೇ ಆಗಿದ್ದು, ಇಂತಹ ಸನ್ನಿವೇಶಗಳು ಸ್ಥಳೀಯವಾಗಿ ಕಂಡುಬಂದಲ್ಲಿ ಮುಖ್ಶ ಚುನಾವಣಾ ಅಧಿಕಾರಿಗಳಿಗೆ ತಹಶೀಲ್ದಾರರಿಗೆ ಮತ್ತು ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳುವಳಿಕೆ ನೀಡಲಾಯಿತು.ಪೂಜ್ಶ ವೀರೇಂದ್ರ ಹೆಗ್ಗಡೆ ಹಾಗೂ ಜನಜಾಗೃತಿ ವೇದಿಕೆಯ ಕನಸು ಮಧ್ಶಮುಕ್ತ ಮತದಾನವಾಗುವುದು   ಸಮಾಜದ ಅಭಿವೃಧ್ಧಿಗೆ ಸೂಕ್ತ ಅಭ್ಶಾರ್ಥಿಗಳನ್ನು  ಆಯ್ಕೆ ಮಾಡುವುದೇ ಆಗಿದೆ, ಮತದಾನದ ಹಕ್ಕನ್ನು ಹೊಂದಿರುವ ಪ್ರತೀ ನಾಗರೀಕನೂ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾಹಿತಿ ನೀಡಿ ಜನಜಾಗೃತಿ ವೇದಿಕೆಯಿಂದ ಬಿಡುಗಡೆಯಾದ ಕರಪತ್ರವನ್ನು ಹಂಚಿದರು.ಈ ಸಂದರ್ಭದಲ್ಲಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಸೇವಾಪ್ರತಿನಿಧಿ ಸವಿತಾ ಒಕ್ಕೂಟದ ಪಧಾದಿಕಾರಿಗಳು ಹಾಗೂ ಸಂಘದ ಸದಸ್ಶರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.