ಧಾರ್ಮಿಕ ಕೇಂದ್ರ ಭಕ್ತರ ಆಸ್ತಿಯೇ ಹೊರತು ಪಕ್ಷದ ಆಸ್ತಿ ಅಲ್ಲ: ಶುಭದ ರಾವ್

ಧಾರ್ಮಿಕ ಕೇಂದ್ರಗಳು ಭಕ್ತರ ಆಸ್ತಿಯೇ ಹೊರತು ಪಕ್ಷದ ಆಸ್ತಿ ಅಲ್ಲ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಹೇಳಿದರು.

ಅವರು ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.  ಕಾರ್ಕಳ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವವು ದೇವಿಯ  ಇಚ್ಚೆಯಂತೆ  ಭಕ್ತಾಭಿಮಾನಿಗಳು ಹಾಗೂ ದಾನಿಗಳ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ ತಾವೂ ಮತ್ತು ತಮ್ಮ ಹಿಂಬಾಲಕರು ದೇವಳದ ಜೀರ್ಣೋದ್ಧಾರಕ್ಕೆ ನೀವೇ ಕಾರಣ ಎನ್ನುತ್ತಿದ್ದಾರೆ ಇದನ್ನು ಯಾರೂ ಒಪ್ಪಲು ಸಾದ್ಯವಿಲ್ಲ. ಹಾಗಾಗಿ ಈ ಬಗ್ಗೆ ನಿಮಗೆ ಹಲವು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಕಾರ್ಕಳ ಮಾರಿಗುಡಿ ಜೀರ್ಣೋದ್ದಾರಕ್ಕೆ ನಿಮ್ಮ ಸರಕಾರದಿಂದ ಬಂದಿರುವ  ಅನುದಾನ ಎಷ್ಟು? ತಾವು ಮತ್ತು ಮುಜುರಾಯಿ ಸಚಿವರು ಭಾಷಣದಲ್ಲಿ ಹೇಳಿದ ಅನುದಾನ ಬಿಡುಗಡೆಯಾಗಿದೆಯೇ ?, ಪೆರ್ವಾಜೆ ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ತಾವು ಮತ್ತು ತಮ್ಮ ಹಿಂಬಾಲಕರು ಭೂ-ವ್ಯವಹಾರ ನಡೆಸುತ್ತಿರುವುದು ಸುಳ್ಳೆ. ಊರಿನ ದೇವಸ್ಥಾನವನ್ನು ತಮ್ಮ ರಾಜಕೀಯ ಲಾಭಕ್ಕೆ  ಬಳಸುವ  ಶಾಸಕರೇ ನಮ್ಮ ಪ್ರಶ್ನೆಗೆ ಉತ್ತರಿಸುವಿರಾ  ಎಂದು ಸಚಿವ ಸುನಿಲ್ ಕುಮಾರ್ ಅವರಿಗೆ ಶುಭದ್ ರಾವ್ ಅವರು ಸವಾಲು ಹಾಕಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸುರೇಂದ್ರ ಶೆಟ್ಟಿ, ಸದಾಶಿವ ದೇವಾಡಿಗ ಉಪಸ್ಥಿತರಿದ್ದರು.

Related Posts

Leave a Reply

Your email address will not be published.