ಕಾಪಿಕಾಡ್ : ಉಮಾಮಹೇಶ್ವರಿ ದೇವಸ್ಥಾನ : ಆಹೋರಾತ್ರಿ ಭಜನೋತ್ಸವ

ಉಳ್ಳಾಲ ತಾಲೂಕಿನ ಕಾಪಿಕಾಡ್ ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಆಹೋರಾತ್ರಿ ಭಜನೋತ್ಸವ ಆಯೋಜಿಸಲಾಯಿತು.

ಶನಿವಾರ ಮುಂಜಾನೆ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಆಹೋರಾತ್ರಿ ಭಜನೋತ್ಸವಕ್ಕೆ ಉದ್ಯಮಿ ವನಿತಾ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ದಂಪತಿಗಳು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.


ಶನಿವಾರ ಮುಂಜಾನೆ ಆರಂಭಗೊಂಡ ಭಜನೋತ್ಸವವು ರಾತ್ರಿ ಶಿವರಾತ್ರಿಯ ಜಾಗರಣೆಯೊಂದಿಗೆ ಮುಂದುವರಿದು ಭಾನುವಾರ ಬೆಳಿಗ್ಗೆ ತನಕ ಮುಂದುವರಿಯಲಿದೆ.ಮಹಾಶಿವಾರಾತ್ರಿಯ ಪ್ರಯುಕ್ತ ಭಜನೋತ್ಸವದ ನಡುವೆ ಮೂರು ಗಂಟೆಗೊಮ್ಮೆ ಜಾಮ ಪೂಜೆ ನಡೆಯಿತು. ಮಧ್ಯಾಹ್ನದ ಮಹಾಪೂಜೆ ವೇಳೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಹಾಲುಪಾಯಸ ಸೇವೆ ನಡೆಯಿತು.

ಬೆಳಗ್ಗಿನ ಭಜನಾ ಮಹೋತ್ಸವದ ಉದ್ಘಾಟನೆಯ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ ಶೇಖರ್, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ , ಮೊಕ್ತೇಸರರಾದ ದಿನೇಶ್ ಕೆ ಅತ್ತಾವಾರ, ರಘುರಾಮ ಶೆಟ್ಟಿ, ಈಶ್ವರ ಉಳ್ಳಾಲ್, ಮಹಾಲಿಂಗ, ನಿರ್ಮಲ ಕುಂಞಂ‌ಬು ಹಾಗೂ ಎಲ್ಲಾ ಉಪ ಸಮಿತಿಯ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.ಶಿವರಾತ್ರಿ ಆಹೋರಾತ್ರಿ ಭಜನೋತ್ಸವದಲ್ಲಿ ಊರ ಪರ ಊರಿನ 20 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ಭಜನಾ ಸೇವೆಯನ್ನು ನಡೆಸಿಕೊಟ್ಟರು

Related Posts

Leave a Reply

Your email address will not be published.