ಕೆಎಂಎಂಸಿಆರ್ ನಿಯಮಗಳಲ್ಲಿ ಕಾನೂನಾತ್ಮಕ ತಿದ್ದುಪಡಿಗೆ ಆಗ್ರಹ : ಸುದ್ದಿಗೋಷ್ಟಿಯಲ್ಲಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಒತ್ತಾಯ

ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಪಟ್ಟ ಕೆಎಂಎಂಸಿಆರ್-1994 ನಿಯಮಗಳಲ್ಲಿ ಕಾನೂನಾತ್ಮಕ ತಿದ್ದುಪಡಿಗೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಆಗ್ರಹಿಸಿದ್ದಾರೆ.

ಅವರು ಕಾರ್ಕಳದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸರ್ಕಾರ ಕಳೆದ 40 ವರ್ಷಗಳಿಂದ ತ್ವರಿತವಾಗಿ ಕಾಮಗಾರಿ ನಿರ್ವಹಿಸುವ ದೃಷ್ಠಿಯಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸಿಕೊಂಡು ಬಂದಿರುತ್ತಾರೆ. ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಈಗಾಗಲೇ ಸಂದಾಯವಾಗಿರುತ್ತದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರಿಂದ ವಸೂಲಿ ಮಾಡಬಾರದು. ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳು ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿರುತ್ತದೆ ಎಂದರು.


Related Posts

Leave a Reply

Your email address will not be published.