ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಮಹೋತ್ಸವ
ಸಂತ ಲಾರೆನ್ಸ್ ಬಸಿಲಿಕದ ಮಹೋತ್ಸವದ ಎರಡನೇ ದಿನ ಭಕ್ತರು ನಿರಂತರ ಆಗಮಿಸುತ್ತ ಸಂತಲಾರೆನ್ಸರ ಪಾವಡ ಮೂರ್ತಿಯ ಬಳಿ ಭಕ್ತಿಯಿಂದ ತಮ್ಮ ಕೋರಿಕೆಗಳಾಗಿ ಪ್ರಾರ್ಥಿಸಿ, ಹರಕೆ ಸಲ್ಲಿಸಿದರು.
ದಿನದ ಬಲಿ ಪೂಜೆಗಳನ್ನು ವಂದನಿಯ ಸುನಿಲ್ ಡೂಮನಿಕ್ ಲೋಬೊ ಪರಂಪಳ್ಳಿ, ವಂದನಿಯ ಕ್ಲಿಫರ್ಡ್ ಫೆರ್ನಾಂಡಿಸ್ ಕುಲಶೇಖರ, ವಂದನೆಯ ಪ್ರದೀಪ್ ಕಾರ್ಡೋಜ ಮೂಡುಬೆಳ್ಳೆ ವಂದನಿಯ ಅಲ್ಬರ್ಟ್ ಕ್ರಾಸ್ತಾ ಪಿ ಯುಸ್ ನಗರ ದಿನದ ಅಂತಿಮ ಬಲಿ ಪೂಜೆಯನ್ನು ವಂದನಿಯ ಲೆಸ್ಲಿ ಡಿಸೋಜ ಅವರು ರಾತ್ರಿ ಎಂಟು ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.