ಕಾರ್ಕಳ: ಗ್ಯಾಸ್ ಸಿಲಿಂಡ್ ಸ್ಫೋಟ, ಅಪಾಯದಿಂದ ಮನೆಮಂದಿ ಪಾರು
ಕಾರ್ಕಳದ ಪುಲ್ಕೇರಿ ಬೈಪಾಸ್ ಬಳಿಯ ಕಟ್ಟಡವೊಂದರ ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ವಸತಿಗೃಹದ ಹೊರಾಂಗಣದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ರಾತ್ರಿ 11.30ರ ವೇಳೆಗೆ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಮನೆಯ ಗೋಡೆ, ಬಾಗಿಲು ಸಂಪೂರ್ಣ ನುಚ್ಚು ನೂರಾಗಿದೆ. ಫ್ಲ್ಯಾಟ್ ನ ಒಳಗಿರುವ ಪೀಠೋಪಕರಣಗಳು, ಬಟ್ಟೆಬರೆ, ಅಡುಗೆಮನೆ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಫ್ಲ್ಯಾಟ್ ನಲ್ಲಿದ್ದವರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ನೇತೃತ್ವದದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದ್ದು, ಸಿಬ್ಬಂದಿ ಅಚ್ಯುತ್ ಕರ್ಕೇರ, ಸುರೇಶ್ ಕುಮಾರ್, ಜಯಮೂಲ್ಯ ನಿತ್ಯಾನಂದ, ರವಿಚಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.