ಕೈಗಾರಿಕಾ ಕಂಪನಿಗಳನ್ನು ಸರಕಾರದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವಂತೆ ಸುಳ್ಯ ಶಾಸಕರಿಂದ ಸಚಿವರಿಗೆ ಮನವಿ

ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗಾರಿಕಾ ಕಂಪನಿಗಳನ್ನು ಸರಕಾರದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವಂತೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ರಾಜ್ಯ ಬೃಹತ್ ಕೈಗಾರಿಕಾ ಮಂತ್ರಿ ಎಂ ಬಿ ಪಾಟೀಲ್ ಅವರಿಗೆ ಬೇಡಿಕೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸರಕಾರದ ಪಶುಸಂಗೋಪನ ಸಚಿವರಾದ k ವೆಂಕಟೇಶ್ ಅವರನ್ನು ಭೇಟಿಯಾಗಿ ಕೊಯಿಲಾ ಪಶು ವೈದ್ಯಕೀಯ ಕಾಲೇಜು ಶೀಘ್ರವಾಗಿ ಆರಂಭಿಸುವಂತೆ ಮತ್ತು ಸುಳ್ಯ ಕೊಡಿಯಾಲಬೈಲಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗೋ ಶಾಲೆಯ ಕೆಲಸಗಳು ಶೀಘ್ರವಾಗಿ ಆರಂಭಿಸುವುದಕ್ಕೆ ಮನವಿಮಾಡಲಾಯಿತು.ಸರಕಾರದ ಕೃಷಿ ಸಚಿರಾದ ಎನ್ ಚೆಲುವರಾಯ ಸ್ವಾಮಿ ಅವರನ್ನು ಭೇಟಿ ಮಾಡಿ ಕೃಷಿಕರ ವಿವಿಧ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.

Related Posts

Leave a Reply

Your email address will not be published.