ಕಾರ್ಕಳ : ಹೆರಿಗೆಯ ಸಮಯ ಮಗು ಮೃತಪಟ್ಟ ಪ್ರಕರಣ : ವೈದ್ಯರ ನಿರ್ಲಕ್ಷ ಆರೋಪ

ಬಡ ರೋಗಿಗಳಿಗೆ ಅನುಕೂಲವಾಗಲೆಂದು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ. ತುಂಬು ಗರ್ಭಿಣಿಯೊಬ್ಬರು ಸರಕಾರಿ ಆಸ್ಪತ್ರೆಗೆ ಬಂದರು ಸಕಾಲದಲ್ಲಿ ವೈದ್ಯರ ನೆರವು ಸಿಗದೆ ಮಂಗಳೂರಿನಲ್ಲಿ ಮೃತಪಟ್ಟಿದ್ದು ಇದಕ್ಕೆ ಕಾರ್ಕಳ ವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಕರ್ತವ್ಯ ಲೋಪ ಕಾರಣವೆಂದು ಮಹಿಳೆಯ ಸಂಬಂಧಿಕರು ದೂರಿದ್ದಾರೆ.

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮಠದಕೆರೆ ನಿವಾಸಿ ಆಶಾ ಪೂಜಾರಿ ಎಂಬವರ ಮಗಳು ಸುಬಿತಾ ಎಂಬವರು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಗು ಹೆಚ್ಚು ತೂಕ ಹೊಂದಿದೆ ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರು ಆಗಿದೆ ಆದ್ದರಿಂದ ಗರ್ಭಿಣಿ ಸುಮಿತಾ ಅವರನ್ನು ಮಂಗಳೂರು ಲೆಡಿ ಕೋಶನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮಗು ಹೆರಿಗೆ ಮುನ್ನವೆ ಮೃತಪಟ್ಟಿತ್ತು ಎಂದು ಆಶಾ ಪೂಜಾರಿ ಆರೋಪಿಸಿದ್ದಾರೆ. ಸುಬಿತಾ ಏಳು ತಿಂಗಳ ಗರ್ಭಿಣಿಯಾದ ಬಳಿಕ ಸೀಮಂತದ ನಂತರ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುತ್ತಿದ್ದರು ಅಲ್ಲದೆ ಮಾರ್ಚ್ 20ರಂದು ಹೆರಿಗೆ ದಿನಾಂಕ ನೀಡಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಗರ್ಭಿಣಿ ಸುಬಿತಾ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ವರದಿ ನೀಡಿದ್ದರೂ ಮಗು ಹೇಗೆ ಮತೆ ಪಟ್ಟಿದೆ ಎಂದು ಆಶಾ ಪೂಜಾರಿ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮ್ಮಂತಹ ಬಡವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ ವೈದ್ಯರು ಜೀವ ತೆಗೆಯುತ್ತಾರೆ. ನನ್ನ ಮಗಳ ಮಗು ಮೃತಪಟ್ಟಿದೆ ಆದರೆ ಇನ್ನು ಯಾರಿಗೂ ಈ ನೋವು ಬರದೇ ಇರಲಿ ಎಂದು ಕಣ್ಣೀರು ಹಾಕಿದರು.
