HomeFresh Newsಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

ಉಳ್ಳಾಲ: ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

ಉಳ್ಳಾಲ:ಟೆಂಪೋ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚಚ್೯ ಬಳಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ತೊಕ್ಕೊಟ್ಟು, ಕೃಷ್ಣ ನಗರ,ಲಚ್ಚಿಲ್ ನಿವಾಸಿ ನಾಗೇಶ್ (62)ಆತ್ಮ ಹತ್ಯೆಗೈದ ದುರ್ದೈವಿ.ನಾಗೇಶ್ ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು.

ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು.ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಗಣೇಶ್ ಭವನ ಮಾಲಕರ ಮನೆಯಂಗಳದಲ್ಲೇ ನಿಲ್ಲಿಸಲಾಗಿದ್ದ ಟೆಂಪೋ ಸೀಟಲ್ಲಿ ನಾಗೇಶ್ ಅವರ ಮೊಬೈಲ್,ನಗದು ,ಫೋಟೊ,ಚಪ್ಪಲಿ ದೊರಕಿದ್ದು ಅನುಮಾನ ಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬಾವಿಯಲ್ಲಿ ನಾಗೇಶ್ ದೇಹವಿರುವುದು ಖಾತ್ರಿಯಾಗಿದ್ದು ಮೃತ ದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾಣಿಸಲಾಗಿದೆ. ಮೃತ ನಾಗೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರು ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments