ಕಾರ್ಕಳ: ಈದ್ ಮಿಲಾದ್ ಹಬ್ಬವನ್ನು ಶಾಂತಿಯಿಂದ ಆಚರಿಸಿ, ಡಿವೈಎಸ್ಪಿ ಅರವಿಂದ ಕಲಗಜ್ಜಿ

ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ. ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಬೇಡಿ ಎಂದು ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ಹೇಳಿದರು.
ಅವರು ಕಾರ್ಕಳ ನಗರ ಠಾಣೆ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲ್ಲಾ ಮಸೀದಿಯ ಧರ್ಮಗುರುಗಳು ಮತ್ತು ಮಸೀದಿಯ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಈದ್ ಮಿಲಾದ್ ಆಚರಣೆಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣವಾದ ಭದ್ರತೆಯನ್ನು ಕೊಡುತ್ತೇವೆ. ಸಮಯದೊಳಗಡೆ ಸಭೆ, ಸಮಾರಂಭಗಳನ್ನು ಮುಕ್ತಾಯಗೊಳಿಸಬೇಕು ಎಂದರು.
ಈ ಸಂದರ್ಭ ಕಾರ್ಕಳ ನಗರ ಠಾಣಾಧಿಕಾರಿ ಸಂದೀಪ್ ಕುಮಾರ್, ಅಪರಾಧ ವಿಭಾಗದ ಅಧಿಕಾರಿ ಸುಬ್ರಹ್ಮಣ್ಯ, ಗ್ರಾಮಾಂತರ ವಿಭಾಗದ ಠಾಣಾಧಿಕಾರಿ ಶುಭಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
