ಕರ್ನಾಟಕ ರಾಜ್ಯ ರೈತಸಂಘ : ಪಾಣೆಮಂಗಳೂರು ಗ್ರಾಮ ರೈತ ಘಟಕ ರಚನೆ ಕುರಿತಾಗಿ ಪೂರ್ವಭಾವಿ ಸಭೆ
ಪಾಣೆಮಂಗಳೂರು ಗ್ರಾಮ ರೈತ ಘಟಕ ರಚನೆ ಕುರಿತಾಗಿ ದಿನಾಂಕ 06-09-2022ರ ಮಂಗಳವಾರ ಮೇಲ್ಕಾರಿನ ಬಿರ್ವ ಸಂಕೀರ್ಣದ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಪುಣಚ ಪ್ರಾಸ್ತವಿಕವಾಗಿ ಮಾತಾನಾಡಿ ರೈತಸಂಘದ ಹುಟ್ಟು ,ಸೈದ್ಧಾಂತಿಕ ಹಿನ್ನೆಲೆ, ವೈಚಾರಿಕತೆ, ಮತ್ತು ಮುಂದಿನ ಗುರಿಗಳ ಕುರಿತು ಮಾತಾನಾಡಿ ರೈತರು ಹಾಗೂ ಗ್ರಾಮೀಣ ಪ್ರದೇಶದ ದುಡಿಯುವ ವರ್ಗ ಎಲ್ಲಾ ಭಿನ್ನಾಭಿಪ್ರಾಯ ಹಾಗೂ ವರ್ಣಭೇದ ಮರೆತು ಒಂದಾಗಿ ಬದುಕಿನ ಹೋರಾಟನಡೆಸಿದಲ್ಲಿ ಮಾತ್ರವೇ ದೇಶಿಯ ಸಂಸ್ಕತಿ ಮತ್ತು ವೈವಿದ್ಯತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು
ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆ ಹಾಗೂ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಸಂಘಟಿತ ಹೋರಾಟದಿಂದ ಮಾತ್ರವೇ ಸಾಧ್ಯವೆಂದು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಒತ್ತಿ ಹೇಳಿದರುಸಭಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿಯವರು ಮಾತಾನಾಡಿ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಕಾಲಾಳುಗಳಾಗಿ ಉಪಯೋಗಿಸುತ್ತಾರೆ ಆದರೇ ಚಳುವಳಿಗಳು ಕಾರ್ಯಕರ್ತರ ಸಮಸ್ಯೆಗಳ ಪರಿಹಾರಕ್ಕೆ ಇಡೀ ಪ್ರಭುತ್ವವನ್ನೇ ಎದುರಿಸಿ ನ್ಯಾಯಾ ದೊರಕಿಸಲು ಸರ್ವತ್ಯಾಗಕ್ಕೂ ಸಿದ್ಧವಾಗುತ್ತದೆ.ಆದ್ದರಿಂದ ರಾಜಕೀಯ ಪಕ್ಷಕ್ಕಿಂತಲೂ ಸಂಘಟನೆಗಳೇ ಕಾರ್ಯಕರ್ತರಿಗೆ ಭದ್ರತೆಯನ್ನು ನೀಡಲೂ ಸಾಧ್ಯ ಎಂದು ಕರೆನೀಡಿದರು
ಪಾಣೆಮಂಗಳೂರು ಪುರಸಭಾ ವ್ಯಾಪ್ತಿಗೆ ಬಂದ ಗ್ರಾಮಾಸ್ಥರಿಗೆ ಗ್ರಾಮಗಳ ರೈತರಿಗೆ ದೊರಕುವ ಸೌಲಭ್ಯಗಳು ಮರೀಚಿಕೆಯಾಗಿವೆ ನಮ್ಮ ಹಕ್ಕು ಗಳನ್ನು ಮತ್ತೆ ಪಡೆಯಲು ಸಂಘಟಿತ ರಾಜಕೀಯೇತರ ಪ್ರಾಮಾಣಿಕ ಹೋರಾಟದ ಆಗತ್ಯವಿದೆಯೆಂದು ಸತೀಶ್ ಪೂಜಾರಿ ಅಭಿಪ್ರಾಯಿ ಸಿದರುಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್ ಕನ್ಯಾನ,ಯುವರೈತಘಟಕದ ಗೌರವಾಧ್ಯಕ್ಷರಾದ ಸುರೇಂದ್ರ ಕೋರ್ಯ,ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್,ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ ಹಾಗೂ ಪಾಣೆಮಂಗಳೂರು ಗ್ರಾಮದ ಹಲವಾರು ರೈತರು ಹಾಗೂ ಮಹಿಳಾ ರೈತರು ಭಾಗಿಯಾಗಿದ್ದರು
ಸತೀಶ್ ಪೂಜಾರಿ ಸ್ವಾಗತಿಸಿ ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂಸ ಶೀತಲ್ ಕಾರ್ಯಕ್ರಮ ನಿರೂಪಿಸಿ ಸಂಚಾಲನಾ ಸಮಿತಿಯನ್ನು ರಚಿಸಲಾಯಿತು ಸೆಪ್ಟೆಂಬರ್ 27 ರಂದು ಪಾಣೆಮಂಗಳೂರು ನೂತನ ಗ್ರಾಮ ಘಟಕದ ರಚನಾ ಸಭೆಯನ್ನು ಆಯೋಜಿಸಲು ನಿರ್ಣಯಿಸಲಾಯಿತು ರಾಷ್ಟ್ರಗೀತೆಯೊಂದಿಗೆ ಸಭೆಯು ಕೊನೆಗೊಂಡಿತು