ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿರುವ ಮೇಘಶ್ಯಾಮ್ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ
ಕಾಸರಗೋಡಿನ ಬಳ್ಳೂರು ರಾಮಚಂದ್ರ ಅಚಾರ್ಯರ ಮಗ ಮೇಘಶ್ಯಾಮ ಎಂಬವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಇವರು ಮಂಗಳೂರು ವಜ್ರಹಿಲ್ಸ್ ಕದ್ರಿ ರಸ್ತೆಯ ಮಂಗಳಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಇವರಿಗೆ ತುರ್ತು ಶಸ್ತ್ರಕ್ರಿಯೆ ನಡೆಸಲು 8.5 ಲಕ್ಷ ರೂ. ಅಗತ್ಯವಿದೆಯೆಂದು ವೈದ್ಯರು ತಿಳಿಸಿದ್ದಾರೆ. ಈ ಮೊತ್ತವನ್ನು ಭರಿಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗದ ಕಾರಣ ದಾನಿಗಳ ಸಹಾಯದ ನೆರವನ್ನು ಬಯಸುತ್ತಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಆರ್ಥಿಕ ಸಹಾಯ ಮಾಡಬೇಕಾಗಿ ಕುಟುಂಬದವರು ವಿನಂತಿಸಿಕೊಂಡಿದ್ದಾರೆ.
ಸಹಾಯ ಮಾಡಲು ಇಚ್ಚಿಸುವವರು
ಹೆಸರು: ಹರ್ಷಿತಾ ಮೇಘಶ್ಯಾಮ್ ಬಳ್ಳೂರು ಹೌಸ್ ಬೆರಿಪದವು ಕಾಸರಗೋಡು
ಖಾತೆ ಸಂಖ್ಯೆ: 68770100013544
ಐಎಫ್‌ಎಸ್‌ಸಿ ಕೋಡ್: BARBOVJMWAR
Google pay: 8618977200ಗೆ ಸಹಾಯವನ್ನು ಮಾಡಬಹುದು.