ಕಟಪಾಡಿ : ಹುಲಿವೇಷ ಹಾಕಿ ಮಾನವೀಯತೆ ಮೆರೆದ ಫ್ರೆಂಡ್ಸ್

ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದ ಈ ಕಾಲಘಟ್ಟದಲ್ಲಿ, ಯಾವುದೋ ಕುಟುಂಬದ ಪರಿಚಯವೇ ಇಲ್ಲದ ಎರಡು ತಿಂಗಳ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಟಪಾಡಿ ಪ್ರೇಂಡ್ಸ್ ಸಂಸ್ಥೆಯ ಸದಸ್ಯರು ಹುಲಿವೇಷ ಹಾಕಿ ಮಾನವೀಯತೆ ಭೂಮಿಯಲ್ಲಿ ಇನ್ನೂ ಸತ್ತಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಹುಲಿವೇಷ ಎಂದರೆ ಬೇರೆ ವೇಷಗಳಂಥಲ್ಲ…ಇದಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವುದೇ ಈ ಹುಲಿವೇಷ. ಬಣ್ಣ ಹಚ್ಚುವ ಮುನ್ನ ಕೆಲವೊಂದು ಧಾರ್ಮಿಕ ಆಚಾರ ವಿಚಾರಗಳಿದ್ದು ಅದನ್ನು ಪೂರೈಸಿಯೇ ಬಣ್ಣ ಹಚ್ಚುವ ಕಾರ್ಯ ಆರಂಭಗೊಂಡಿದೆ ಕೆಲವೊಂದು ಯುವಕರು ತಪ್ಪು ಹೆಜ್ಜೆ ಇಟ್ಟರೂ ತಕ್ಷಣ ಅದನ್ನು ತಿದ್ದಿ ಬುದ್ಧಿ ಹೇಳುವ ಹಿರಿಯರ ದಂಡೇ ಈ ತಂಡದ ಹಿಂದಿದೆ.

ಆ ಕಾರಣದಿಂದ ಎಲ್ಲೂ ಧಾರ್ಮಿಕ ಬಾವಣೆಗಳಿಗೆ ಚ್ಯುತಿ ಬಾರದಂತೆ ಭಯಭಕ್ತಿಯಿಂದ ದೇವರ ಎಂಬ ಸೇವೆ ಎಂಬುದಾಗಿ ಎಲ್ಲಾ ಯುವಕರು ಪಾಲ್ಗೊಂಡಿರುವುದು ಉತ್ತಮ ಮಾರ್ಗದರ್ಶ ವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಈ ಸಂಸ್ಥೆ ಸಾಭೀತು ಪಡಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ

Related Posts

Leave a Reply

Your email address will not be published.