ಕಟಪಾಡಿ : 40ನೇ ವರ್ಷದ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ
ಕಟಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 40ನೇಯ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವವು ವೇದಮೂರ್ತಿ ಶ್ರೀ ಪುರುಷೋತ್ತಮ ಆಚಾರ್ಯ ಅಗಳಿಮಠ ಇವರ ಪೌರೋಹಿತ್ಯದಲ್ಲಿ ಜರುಗಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಟಪಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾದಡಾ| ಎ. ರವೀಂದ್ರನಾಥ ಶೆಟ್ಟಿ,
ಶ್ರೀ ನಾರಾಯಣ ಭಟ್ ಅರ್ಚಕರು,ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ, ಕೋಶಾಧಿಕಾರಿ ಶ್ರೀ ಕಾಮ್ ರಾಜ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಮಹೇಶ್ ಅಂಚನ್, ಜೊತೆ ಕಾರ್ಯದರ್ಶಿ ಶ್ರೀ ಎನ್. ಜಿ ಸುಕುಮಾರ್ ಮತ್ತು ಜೊತೆ ಕೋಶಾಧಿಕಾರಿ ಶ್ರೀ ಹರೀಶ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.